ಕಲಬುರಗಿಯಲ್ಲಿ ಗ್ಯಾಸ್ ಸಿಲೆಂಡರ್ ಸ್ಪೋಟ: ಓರ್ವನಿಗೆ ಗಂಭೀರ ಗಾಯ

ಹೊಸದಿಗಂತ ವರದಿ, ಕಲಬುರಗಿ
ಟಿನ್ ಶೆಡ್ ನಲ್ಲಿದ್ದ ಗ್ಯಾಸ್ ಸಿಲೆಂಡರ್ ಸ್ಪೋಟಗೊಂಡು ಓರ್ವ ಗಂಭಿರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹರಸೂರ್ ಗ್ರಾಮದಲ್ಲಿ ನಡೆದಿದೆ.
ಶಿವಪ್ಪ ತಳವಾರ ಸಿಲೆಂಡರ್ ಬ್ಲಾಸ್ಟ್ ನಿಂದ ಗಾಯಗೊಂಡ ವ್ಯಕ್ತಿ. ಶಿವಪ್ಪ ವಾಸವಿದ್ದ ಟಿನ್ ಶೆಡ್ ನಲ್ಲಿ ಸ್ಪೋಟ ಅವಘಡ ಸಂಭವಿಸಿದ್ದು, ಸ್ಫೋಟದ ಹಿನ್ನಲೆ ದೇಹದ ಚರ್ಮ ಸುಟ್ಟು ಹೋಗಿದೆ. ಚಿಕಿತ್ಸೆಗಾಗಿ ಗಾಯಾಳುವನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!