ಗ್ಯಾಸ್ ಗೀಸರ್ ಸೋರಿಕೆ: ತಾಯಿ ಸಾವು, ಮಗು ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಸದಾಶಿವನಗರದ ಅಶ್ವಥ್ ನಗರದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಮೃತಪಟ್ಟು, 4 ವರ್ಷದ ಮಗು ಸ್ಥಿತಿ ಗಂಭೀರವಾದ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ರಮ್ಯಾ (23) ಎಂದು ಗುರುತಿಸಲಾಗಿದೆ. ರಮ್ಯಾ ತನ್ನ ಮಗುವಿಗೆ ಸ್ನಾನ ಮಾಡಿಸುವಾಗ ಗ್ಯಾಸ್ ಗೀಸರ್ (ಕಾರ್ಬನ್ ಮೋನಾಕ್ಸೈಡ್) ಸೋರಿಕೆಯಾಗಿದೆ.

ಕಿಟಕಿ ಬಾಗಿಲು ಮುಚ್ಚಿದ್ದರಿಂದ, ಹೊರಗಡೆಯಿಂದ ಗಾಳಿ ಬಾರದೇ ಇದ್ದರಿಂದ ತಾಯಿ- ಮಗು ಅಸ್ವಸ್ಥಗೊಂಡಿದ್ದರು.
ಕೂಡಲೇ ಇಬ್ಬರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ತಾಯಿ ರಮ್ಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಮಗು ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!