ಗೇಟ್ 2023 ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ

ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್‌ ಇನ್‌ ಇಂಜಿನಿಯರಿಂಗ್ (ಗೇಟ್) 2023ರ ಪ್ರವೇಶ ಪತ್ರವನ್ನು ಇಂದು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳು ಪ್ರವೇಶ ಪತ್ರ ಪ್ರಕಟವಾದ ಬಳಿಕ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕಾನ್ಪುರ್‌, ‌2023ರ ಗೇಟ್ ಪರೀಕ್ಷೆಯನ್ನು ಆಯೋಜಿಸುತ್ತಿದ್ದು, ಪರೀಕ್ಷೆಯು ಫೆಬ್ರವರಿ 4,2022 ರಿಂದ ಫೆಬ್ರವರಿ 12,2022ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ಪರೀಕ್ಷೆಯು ಎರಡು ಅವಧಿಗಳಲ್ಲಿ ನಡೆಯಲಿದೆ. ಮೊದಲ ಅವಧಿಯು ಬೆಳಿಗ್ಗೆ 9:30 ರಿಂದ 12:30ರ ವರೆಗೆ ಮತ್ತು ಎರಡನೇ ಅವಧಿಯು ಮಧ್ಯಾಹ್ನ 2:30 ರಿಂದ ಸಂಜೆ 5:30ರ ವರೆಗೆ ನಡೆಯಲಿದೆ.

ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ? :
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ? :
ಸ್ಟೆಪ್ 1: ಅಭ್ಯರ್ಥಿಗಳು ಐಐಟಿ ಕಾನ್ಪುರ್‌ ಅಧಿಕೃತ ವೆಬ್‌ಸೈಟ್‌ https://gate.iitkgp.ac.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಲಭ್ಯವಿರುವ Admit Card is now available for download ಮುಂದಿರುವ click here ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಅಭ್ಯರ್ಥಿಗಳು ಎನ್‌ರೋಲ್ಮೆಂಟ್ ಐಡಿ/ ಇ-ಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ನೀಡಿ ಲಾಗಿನ್ ಆಗಿ
ಸ್ಟೆಪ್ 4: ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಲಭ್ಯವಾಗುವುದು ಅದನ್ನು ಡೌನ್‌ಲೋಡ್ ಮಾಡಿಕೊಂಡು ಸೇವ್ ಮಾಡಿಕೊಳ್ಳಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!