ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಪ್ರಸಿದ್ಧ ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸುತ್ತಿದ್ದು, ಇದೀಗ ಸಿಸ್ಕೋ ಸರದಿ.
ಈಗಗಾಲೇ ಮೆಟಾ, ಅಮೆಜಾನ್ ಮತ್ತು ಟ್ವಿಟರ್ ಸಹಿತ ಅನೇಕ ದೊಡ್ಡ ದೊಡ್ಡ ಟೆಕ್ ಕಂಪನಿಗಳುಸಾವಿರಾರು ಉದ್ಯೋಗಿಗಳನ್ನ ಕೆಲಸದಿಂದ ವಜಾಗೊಳಿಸಿದ್ದು,ಇದೀಗ ಸಿಸ್ಕೋ ಕಂಪನಿಯು ತನ್ನ ಶೇಕಡಾ 5ರಷ್ಟು ಉದ್ಯೋಗಿಗಳನ್ನ ಕೆಲಸದಿಂದ ಗೇಟ್ ಪಾಸ್ ನೀಡಲು ಮುಂದಾಗಿದೆ.
ಸಿಸ್ಕೋ ಸುಮಾರು 5 ಪ್ರತಿಶತದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಹೇಳಲಾಗುತ್ತದೆ, ಇದರ ಅಂದಾಜು 4000ಕ್ಕೂ ಹೆಚ್ಚಾಗಿದೆ . ಈ ವಜಾಗೊಳಿಸುವಿಕೆ ವ್ಯವಹಾರಗಳ ಮೇಲಿನ ಹಕ್ಕುಸ್ವಾಮ್ಯವನ್ನು ಮರುಸಮತೋಲನ ಗೊಳಿಸುವ ಕಾಯ್ದೆಯ ಒಂದು ಭಾಗವಾಗಿದೆ ಎಂದು ಅದು ಹೇಳಿದೆ. ಈ ಬಗ್ಗೆ ಸಿಸ್ಕೋ ನೇರವಾಗಿ ಪ್ರತಿಕ್ರಿಯಿಸಿಲ್ಲ. ಆದ್ರೆ, ಅಧಿಕೃತ ಹೇಳಿಕೆಯಲ್ಲಿ ತಾನು ಲಘುವಾಗಿ ತೆಗೆದುಕೊಳ್ಳಲಿಲ್ಲ ಎಂದು ಹೇಳಿದೆ.