ಕೆಎಲ್ ರಾಹುಲ್- ಅತಿಯಾ ಶೆಟ್ಟಿ ಮದುವೆ ಡೇಟ್ ಫಿಕ್ಸ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಮದುವೆ ಕುರಿತ ವಿಚಾರ ಎಲ್ಲರಿಗು ತಿಳಿದ ಸಂಗತಿ. ಇದೀಗ ಹೊಸ ಮಾಹಿತಿ ಏನೆಂದರೆ ಇಬ್ಬರ ಮದುವೆ ಮುಂದಿನ ವರ್ಷಕ್ಕೆ ಶಿಫ್ಟ್ ಆಗಿದೆ.2023 ಜನವರಿಯಲ್ಲಿ ಇಬ್ಬರೂ ಹಸೆಮಣೆ ಏರುತ್ತಿರುವುದು ಕನ್ಫರ್ಮ್ ಎನ್ನುತ್ತಿವೆ ಮೂಲಗಳು.

ಹೌದು ಸುನಿಲ್ ಶೆಟ್ಟಿ ಮತ್ತು ರಾಹುಲ್ ಕುಟುಂಬ ಸದ್ಯ ಮದುವೆ ದಿನಾಂಕ ಅಂತಿಮ ಗೊಳಿಸಿದೆ. ಪಿಂಕ್‌ವಿಲ್ಲಾ ವರದಿ ಪ್ರಕಾರ, ಜನವರಿ 23ಕ್ಕೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ.

ಜನವರಿ 21ರಿಂದ ಮದುವೆ ಸಮಾರಂಭ ಪ್ರಾರಂಭವಾಗುತ್ತಿದೆ. ಮೂರು ದಿನಗಳು ನಡೆಯುವ ಅದ್ದೂರಿ ಮದುವೆ ಸಮಾರಂಭದಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ.

21ರಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಲಿದೆ, ಮೆಹಂದಿ, ಹಳದಿ, ಸಂಗೀತ ಸಮಾರಂಭ ಸೇರಿದ್ದಂತೆ ಎಲ್ಲಾ ಶಾಸ್ತ್ರಗಳನ್ನು ದಕ್ಷಣ ಭಾರತದ ಶೈಲಿಯಲ್ಲಿ ಸಾಂಪ್ರದಾಯಬದ್ದವಾಗಿ ಮಾಡಲು ನಿರ್ಧರಿಸಿದ್ದಾರೆ .ಈ ಮದುವೆ ಸುನಿಲ್ ಶೆಟ್ಟಿ ಅವರ ಖಂಡಾಲ ಬಂಗಲೆ ಜಹಾನ್ ನಲ್ಲೇ ನಡೆಯಲಿದೆ.
ಈ ಬಗ್ಗೆ ರಾಹುಲ್ ಅಥವಾ ಆತಿಯಾ ಕಡೆಯಿಂದ ಯುವುದೇ ಅಧಿಕೃತ ಹೇಳಿಕೆ ರಿಲೀಸ್ ಆಗಿಲ್ಲ. ಇತ್ತೀಚಿಗಷ್ಟೆ ಸುನಿಲ್ ಶೆಟ್ಟಿ ಆತಿಯಾ ಮತ್ತು ರಾಹುಲ್ ಮದುವೆ ಬಗ್ಗೆ ಬಹಿರಂಗ ಪಡಿಸಿದ್ದರು. ಆದರೆ ದಿನಾಂಕದ ಬಗ್ಗೆ ರಿವೀಲ್ ಮಾಡಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!