Monday, October 2, 2023

Latest Posts

ಏಪ್ರಿಲ್ ಒಂದೇ ತಿಂಗಳಿನಲ್ಲಿ 7.4 ದಶಲಕ್ಷಕ್ಕೂ ಹೆಚ್ಚು WhatsApp ಖಾತೆಗೆ ಗೇಟ್ ಪಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಾಟ್ಸಾಪ್ ಈಗಾಗಲೇ ಹಲವು ಕಾರಣಗಳಿಂದ ಅನೇಕ ಖಾತೆಗಳನ್ನು ನಿಷೇಧಗೊಳಿಸಲಾಗಿತ್ತು. ಇದೀಗ ಏಪ್ರಿಲ್ ಒಂದೇ ತಿಂಗಳಿನಲ್ಲಿ 7.4 ದಶಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಲಾಗಿದೆ.

ಈ ಸಂಬಂಧ ತನ್ನ ವರದಿಯನ್ನು ಪ್ರಕಟಿಸಿರುವ ವಾಟ್ಸಾಪ, ಐಟಿ ನಿಯಮಗಳು 2021 ಗೆ ಅನುಗುಣವಾಗಿ, ನಾವು ಏಪ್ರಿಲ್ 2023 ತಿಂಗಳಿನಲ್ಲಿ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ನಂತ್ರ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದೆ.

ಬಳಕೆದಾರರ ದೂರುಗಳು ಮತ್ತು ನಮ್ಮ ಪ್ಲಾಟ್ಫಾರ್ಮ್ನಲ್ಲಿ ದುರುಪಯೋಗವನ್ನು ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ ಎಂದು ಹೇಳಿದೆ.

ಇತ್ತೀಚಿನ ಮಾಸಿಕ ವರದಿಯಲ್ಲಿ ಸೆರೆಹಿಡಿದಂತೆ, ಏಪ್ರಿಲ್ ತಿಂಗಳಲ್ಲಿ ವಾಟ್ಸಾಪ್ 7.4 ದಶಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ ( WhatsApp banned ) ಮತ್ತು ಈ ಖಾತೆಗಳಲ್ಲಿ 2.4 ದಶಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಬರುವ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!