ಭಾರತದಿಂದ ಪಾಕ್ ಸೆಲೆಬ್ರಿಟಿಗಳಿಗೂ ಗೇಟ್ ಪಾಸ್: ನಟಿ ಹನಿಯಾ ಅಮಿರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಅನೇಕ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.ಸಿಂಧೂ ನದಿ ನೀರು ಸ್ಥಗಿತ, ಪಾಕ್‌ ಪ್ರಜೆಗಳ ವೀಸಾ ರದ್ದು, ‍ಪಾಕ್‌ನಿಂದ ಬರುವ ಸರಕುಗಳಿಗೆ ನಿರ್ಬಂಧ ಹೇರುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರ ಬೆನ್ನಲ್ಲೆ ಭಾರತದಲ್ಲಿ ಪಾಕಿಸ್ತಾನಿ ಕಲಾವಿದರಿಗೆ ನಟಿಸಲು ಅವಕಾಶ ನೀಡದಂತೆ ನಿಯಮ ಜಾರಿಗೊಳಿಸಲಾಗಿದೆ. ಇದೀಗ ಖ್ಯಾತ ಪಾಕಿಸ್ತಾನಿ ಕಲಾವಿದೆ ಹನಿಯಾ ಅಮಿರ್ ಭಾರತದ ಈ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದಲ್ಲಿ ಪಾಕಿಸ್ತಾನಿ ಕಲಾವಿದರೂ ಕೂಡ ಹಲವು ಅಭಿಮಾನಿಗಳನ್ನು ಹೊಂದಿದ್ದು, ಹನಿಯಾ ಆಮಿರ್, ಮಹಿರಾ ಖಾನ್, ಫವಾದ್ ಖಾನ್, ಉಸ್ತಾದ್ ರಹತ್ ಫತೇಹ್ ಅಲಿ ಖಾನ್ ಮತ್ತು ಅಲಿ ಜಾಫರ್ ಸೇರಿದಂತೆ ಪಾಕಿಸ್ತಾನದ ಪ್ರಸಿದ್ಧ ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬ್ಲಾಕ್ ಮಾಡುವ ನಿರ್ಣಯಕ್ಕೆ ಭಾರತ ಮುಂದಾಗಿದೆ.

ಕೆಲವು ಭಾರತೀಯ ಅಭಿಮಾನಿಗಳು ತಮ್ಮ ಪಾಕಿಸ್ತಾನದ ನೆಚ್ಚಿನ ಸೆಲೆಬ್ರಿಟಿಗಳ ಪ್ರೊಫೈಲ್ ಫಾಲೋ ಮಾಡುತ್ತಾರೆ. ಈ ಮೂಲಕ ಕೆಲವು ಭಾರತೀಯರು ಪಾಕಿಸ್ತಾನ ಕಲಾವಿದರನ್ನು ಸಹ ಬೆಂಬಲಿಸುತ್ತಿದ್ದಾರೆ. ಅಂತಹ ಸೆಲೆಬ್ರಿಟಿಗಳಲ್ಲಿ ಜನಪ್ರಿಯ ನಟಿ ಹನಿಯಾ ಆಮಿರ್ ಕೂಡ ಒಬ್ಬರು.

ಇದೀಗ ನಟಿ ಹನಿಯಾ ಆಮಿರ್ ಭಾರತೀಯ ಅಭಿಮಾನಿಗಳಿಗಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತನ್ನ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಬೇಸರವಿದೆ. ನಾನು ಅಳುತ್ತಿದ್ದೇನೆ ಎಂದು ಕ್ಯಾಪ್ಶನ್‌ನೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನು ಕಂಡು ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಿ ಮಿಸ್ ಯು, ಚಿಂತಿಸಬೇಡಿ, ನಾವು ನಿಮಗಾಗಿ ವಿಪಿಎನ್ ಚಂದಾದಾರಿಕೆಯನ್ನು ತೆಗೆದುಕೊಂಡಿದ್ದೇವೆ ಎಂದು ಕೆಲವು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!