ಹೊಸ ದಿಗಂತ ಡಿಜಿಟಲ್ ಡೆಸ್ಕ್:
16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1ರಿಂದ ಮಾರ್ಚ್ 8ರವರೆಗೆ ನಡೆಯಲಿದೆ ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಚಲನಚಿತ್ರೋತ್ಸವ ನಡೆಯುತ್ತಿದೆ. ಮಾರ್ಚ್1 ರಿಂದ ಪ್ರಾರಂಭವಾಗಿ ಮಾರ್ಚ್ 8ರಂದ ಸಮಾರಂಭ ನಡೆಯಲಿದೆ. ಈ ವರ್ಷ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಲ್ಲಿ ಚಲನಚಿತ್ರೋತ್ಸವ ನಡೆಯುತ್ತಿದೆ ಎಂದು ತಿಳಿಸಿದರು.
60 ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳು 13 ಚಿತ್ರಮಂದಿರದಲ್ಲಿ ಪ್ರದರ್ಶನ ಆಗಲಿವೆ. ಒಟ್ಟು 400 ಶೋಗಳು ಇರಲಿವೆ. ಬೆಂಗಳೂರು ನಾಗರಿಕರಿಗೆ ಬೇರೆ ಬೇರೆ ದೇಶ, ಭಾಷೆ ನೋಡೋ ಅವಕಾಶ ಸಿಗಲಿದೆ. ಬೆಂಗಳೂರು ನಾಗರೀಕರಿಗೆ ಸುವರ್ಣ ಅವಕಾಶ ಅಂತ ತಿಳಿಸಿದರು. ಕಳೆದ ವರ್ಷ 7 ಕೋಟಿ ರೂ. ಚಲನಚಿತ್ರೋತ್ಸವಕ್ಕೆ ನೀಡಲಾಗಿತ್ತು. ಈ ವರ್ಷ 9 ಕೋಟಿ ರೂ. ನೀಡಲಾಗುತ್ತದೆ ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಚಿತ್ರೋತ್ಸವಕ್ಕೆ ಯಾರು ಮುಖ್ಯ ಅತಿಥಿಗಳು (ರಾಯಭಾರಿ) ಆಗಬೇಕು ಅಂತ ಸಮಿತಿಯೇ ತೀರ್ಮಾನಿಸುತ್ತದೆ. ರಾಜ್ಯಪಾಲ ಗೆಹ್ಲೋಟ್ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಳಿದ್ದಾರೆ ಎಂದು ಸಿಎಂ ತಿಳಿಸಿದರು.
ಈ ಬಾರಿಯು ಕೂಡ ಚಲನಚಿತ್ರೋತ್ಸವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.
ಈ ಸಭೆಯಲ್ಲಿ ನಟ ಡಾಲಿ, ಭಾವನಾ, ನೀನಾಸಂ ಸತೀಶ್, ಸಾಧುಕೋಕಿಲ ಭಾಗಿಯಾಗಿದ್ದಾರೆ.