ಸೆಮಿಕಂಡಕ್ಟರ್ ಉತ್ಪಾದನೆ- ಅದಾನಿ ಅಭಿಮತವೇನು?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

“ಸೆಮಿಕಂಡಕ್ಟರ್ ವಲಯದಲ್ಲಿ ಭಾರತ ಜಾಗತಿಕ ಪೂರೈಕೆ ಸರಪಳಿ ಮೇಲೆಯೇ ಅವಲಂಬಿತವಾಗಲಾಗದು. ಆದರೆ ವೈರುಧ್ಯ ನೋಡಿ…ಸೆಮಿಕಂಡಕ್ಟರ್ ಉದ್ದಿಮೆಗೆ, ಅದರಲ್ಲೂ ಅಮೆರಿಕದ ಕಂಪನಿಗಳಿಗೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರುಗಳನ್ನು ಪೂರೈಸುವುದು ಭಾರತವೇ. ಆದರೆ ಸೆಮಿಕಂಡಕ್ಟರ್ ಉತ್ಪಾದನೆ ಭಾರತದ ಹೊರಗಡೆಯೇ ಹೆಚ್ಚಾಗುತ್ತಿದೆ..”

ಹೀಗೆಂದಿದ್ದು ಭಾರತದ ಉದ್ಯಮ ದಿಗ್ಗಜ ಗೌತಂ ಅದಾನಿ. ದೆಹಲಿಯಲ್ಲಿ ಅಮೆರಿಕ-ಭಾರತ ಉದ್ದಿಮೆ ಸಮಿತಿ ಆಯೋಜಿಸಿದ್ದ ಚಿಂತನಕೂಟದಲ್ಲಿ ಅದಾನಿಗೆ 2022ರ ಗ್ಲೋಬಲ್ ಲೀಡರ್ಶಿಪ್ ಪ್ರಶಸ್ತಿ ನೀಡಲಾಯಿತು.

ಬುಧವಾರದ ಆ ಕಾರ್ಯಕ್ರಮದಲ್ಲಿ ಮಾತನಾಡಿದ ಅದಾನಿ, ಭಾರತವು ಸೆಮಿಕಂಡಕ್ಟರ್ ಉತ್ಪಾದನೆ ವಲಯದಲ್ಲಿ ಪ್ರಗತಿ ಸಾಧಿಸುವುದಕ್ಕೆ ಅಮೆರಿಕವು ತಂತ್ರಜ್ಞಾನ ಹಸ್ತಾಂತರಕ್ಕೆ ಸಹಕರಿಸಬೇಕೆಂದು ಆಗ್ರಹಿಸಿದರು. 

ಆರೋಗ್ಯ, ರಕ್ಷಣೆ ಮತ್ತು ಸೈಬರ್ ವಲಯಗಳಲ್ಲೂ ಅಮೆರಿಕ-ಭಾರತಗಳ ಸಹಭಾಗಿತ್ವ ಹೆಚ್ಚಬೇಕು ಎಂದರು ಅದಾನಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!