ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಮತ್ತು ಅವರ ಪತ್ನಿ ನವಾಜ್ ಸಿಂಘಾನಿಯಾ ಸೋಮವಾರ ಬೇರ್ಪಡುವುದಾಗಿ ಘೋಷಿಸಿದ್ದಾರೆ.
ಈ ದೀಪಾವಳಿ ಹಿಂದಿನಂತೆ ಇರುವುದಿಲ್ಲ. ದಂಪತಿಗಳಾಗಿ ಒಟ್ಟಿಗೆ 32 ವರ್ಷ ಕಳೆದಿದ್ದೇವೆ, ಪೋಷಕರಾಗಿ ಜವಾಬ್ದಾರಿ ನಿಭಾಯಿಸಿದ್ದೇವೆ ಮತ್ತು ಯಾವಾಗಲೂ ಪರಸ್ಪರ ಶಕ್ತಿಯ ಮೂಲವಾಗಿದ್ದೆವು. ನಮ್ಮ ಜೀವನದಲ್ಲಿ ಮತ್ತೆರಡು ಸುಂದರ ಜೀವಗಳು ಸೇರ್ಪಡೆಯಾಗಿದ್ದರಿಂದ ನಾವು ಬದ್ಧತೆ, ಸಂಕಲ್ಪ, ನಂಬಿಕೆಯೊಂದಿಗೆ ಪ್ರಯಾಣಿಸಿದ್ದೇವೆ ಎಂದು ಗೌತಮ್ ಸಿಂಘಾನಿಯಾ ಎಕ್ಸ್ (ಟ್ವಿಟರ್) ನಲ್ಲಿ ಬರೆದಿದ್ದಾರೆ.
ತಾವಿಬ್ಬರೂ ಇನ್ನು ಮುಂದೆ ಬೇರ್ಪಡುವುದಾಗಿ ತಿಳಿಸಿದ ಸಿಂಘಾನಿಯಾ, ತಮ್ಮ ಹೆಣ್ಣುಮಕ್ಕಳಾದ ನಿಹಾರಿಕಾ ಮತ್ತು ನಿಸಾ ಅವರ ಉತ್ತಮ ಭವಿಷ್ಯಕ್ಕೆ ಏನೆಲ್ಲ ಮಾಡಬಹುದೋ ಅದನ್ನೆಲ್ಲ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ದಯವಿಟ್ಟು ನಮ್ಮ ಈ ವೈಯಕ್ತಿಕ ನಿರ್ಧಾರವನ್ನು ಗೌರವಿಸಿ ಮತ್ತು ಈ ಸಂಬಂಧದ ಎಲ್ಲಾ ಅಂಶಗಳನ್ನು ಪರಿಹರಿಸಲು ದಯವಿಟ್ಟು ನಮಗೆ ಅವಕಾಶ ನೀಡಿ. ಈ ಸಮಯದಲ್ಲಿ ಇಡೀ ಕುಟುಂಬಕ್ಕೆ ನಿಮ್ಮ ಶುಭ ಹಾರೈಕೆಗಳನ್ನು ಕೋರುತ್ತೇನೆ ಎಂದು ಸಿಂಘಾನಿಯಾ ಬರೆದಿದ್ದಾರೆ.