ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಲ್ಲಿ ಸದಾ ಒಟ್ಟಿಗೆ ಇರುತ್ತಿದ್ದ ಮಂಜು ಹಾಗೂ ಗೌತಮಿ ಜಾಧವ್ ಬಗ್ಗೆ ನೆಗೆಟಿವ್ ಕಮೆಂಟ್‌ಗಳು ಹರಿದಾಡುತ್ತಿದ್ದವು. ಆಂಟಿ ಅಂಕಲ್ ಲವ್ ಸ್ಟೋರಿ ಎನ್ನುವ ಕಮೆಂಟ್‌ಗಳೂ ಬಂದಿವೆ. ಈ ಬಗ್ಗೆ ನಟಿ ಗೌತಮಿ ತಲೆಕೆಡಿಸಿಕೊಂಡಿಲ್ಲ. ಜನ ಮಾತನಾಡಲಿ ನಮ್ಮ ಬಗ್ಗೆ ನಮಗೆ ಗೊತ್ತು ಎಂದು ಹೇಳಿದ್ದಾರೆ.
ಗೌತಮಿ ಸಂಸಾರವನ್ನು ಮಂಜು ಹಾಳು ಮಾಡಿದ್ದಾರೆ ಎಂದೆಲ್ಲಾ ಕಮೆಂಟ್ಸ್ ವೈರಲ್ ಆಗಿದ್ದು, ಇದೀಗ ನಟಿ ಫೋಟೊ ಮೂಲಕ ಉತ್ತರ ನೀಡಿದ್ದಾರೆ.
ಗೌತಮಿ ಜಾಧವ್, ಅವರ ಪತಿ ಅಭಿಷೇಕ್ ಹಾಗೂ ಮಂಜು ಒಂದೆಡೆ ಸೇರಿದ್ದಾರೆ. ಈ ಮೂವರು ಈವರೆಗೆ ಒಟ್ಟಾಗಿ ಯಾವುದೇ ಫೋಟೋ ತೆಗೆಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಮೂವರು ಒಟ್ಟಾಗಿ ಸೇರಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಎಲ್ಲರ ಮೊಗದಲ್ಲೂ ನಗು ಇದೆ. ಅಭಿಷೇಕ್ ಹೆಗಲಮೇಲೆ ಮಂಜು ಕೈ ಹಾಕಿ ನಿಂತಿದ್ದಾರೆ. ಈ ಮೂಲಕ ಇವರ ಮಧ್ಯೆ ಯಾವುದೇ ಮನಸ್ತಾಪ ಇಲ್ಲ ಅನ್ನೋದು ಸ್ಪಷ್ಟವಾಗಿದೆ.