July 23, 2026
Thursday, July 23, 2026
spot_img

ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಗಾವಸ್ಕರ್ ಕೆಂಡಾಮಂಡಲ: ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐರ್ಲೆಂಡ್ ವಿರುದ್ಧದ ಅನಿರೀಕ್ಷಿತ ಸರಣಿ ಸೋಲಿನ ಬೆನ್ನಲ್ಲೇ ಮಾಜಿ ನಾಯಕ ಸುನಿಲ್ ಗಾವಸ್ಕರ್ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧಾರಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. 15 ವರ್ಷದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಅವಕಾಶ ನೀಡದಿರುವುದು ಮ್ಯಾನೇಜ್‌ಮೆಂಟ್ ಮಾಡಿದ ದೊಡ್ಡ ತಪ್ಪು ಎಂದು ಅವರು ಗುಡುಗಿದ್ದಾರೆ.

ಇಂಗ್ಲೆಂಡ್ ಸರಣಿಯಲ್ಲಿ ಆ ತಪ್ಪು ಬೇಡ!

ಬುಧವಾರದಿಂದ (ಜುಲೈ 1) ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲೇ ವೈಭವ್ ಅವರನ್ನು ಕಣಕ್ಕಿಳಿಸಬೇಕು ಎಂದು ಗಾವಸ್ಕರ್ ಆಗ್ರಹಿಸಿದ್ದಾರೆ. ಐಪಿಎಲ್ 2026 ರಲ್ಲಿ ಭರ್ಜರಿ 776 ರನ್ ಸಿಡಿಸಿ ಅಬ್ಬರಿಸಿರುವ ವೈಭವ್, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ಬೌಲರ್‌ಗಳನ್ನು ಧೂಳೀಪಟ ಮಾಡಬಲ್ಲರು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಾವಸ್ಕರ್ ನೀಡಿದ ಗೇಮ್ ಪ್ಲಾನ್ ಏನು?

“ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಆರಂಭಿಕರಾಗಿ ಮುಂದುವರಿಯಲಿ. ಸದ್ಯ ಫಾರ್ಮ್‌ ಇಲ್ಲದೆ ಪರದಾಡುತ್ತಿರುವ ಮಿಡಲ್ ಆರ್ಡರ್ ಬ್ಯಾಟರ್ ಒಬ್ಬರನ್ನು ಕೈಬಿಟ್ಟು, 3ನೇ ಕ್ರಮಾಂಕದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಿ.” – ಸುನಿಲ್ ಗಾವಸ್ಕರ್

ಐರ್ಲೆಂಡ್‌ನಂತಹ ಕಡಿಮೆ ಒತ್ತಡದ ಸರಣಿಯಲ್ಲೇ ಈ ಯುವ ಆಟಗಾರನಿಗೆ ಡೆಬ್ಯೂ ಮಾಡಲು ಸೂಕ್ತ ಅವಕಾಶವಿತ್ತು. ಆದರೆ ಮ್ಯಾನೇಜ್‌ಮೆಂಟ್ ಅತಿಯಾದ ಜಾಗರೂಕತೆ ತೋರಿ ತಪ್ಪು ಮಾಡಿದೆ. ಇಂಗ್ಲೆಂಡ್ ಸರಣಿಯಲ್ಲಾದರೂ ಈ ತಪ್ಪನ್ನು ತಿದ್ದಿಕೊಂಡು ವೈಭವ್‌ಗೆ ಜಾಗ ಮಾಡಿಕೊಡಬೇಕಿದೆ ಎಂದು ಗಾವಸ್ಕರ್ ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !