ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ದಾಳಿಯ ನಂತರ ಹಾನಿಗೊಳಗಾದ ಇಸ್ರೇಲ್ ದೇಶಕ್ಕೆ ಜೋ ಬಿಡೆನ್ ಭೇಟಿ ಮಹತ್ವ ಪಡೆದುಕೊಂಡಿದೆ. ನಾಳೆ ಇಸ್ರೇಲ್ ಗೆ ಭೇಟಿ ನೀಡಲಿರುವ ಜೋ ಬಿಡನ್, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಭೇಟಿ ಮಹತ್ವದ್ದಾಗಿದ್ದು, ಗಾಜಾ ನಾಗರೀಕರಿಗೆ ಮಾನವೀಯ ನೆರವು ಕುರಿತು ಚರ್ಚೆ ನಡೆಸಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ತಿಳಿಸಿದರು.
ಗಾಜಾಕ್ಕೆ ಸಹಾಯ ಮಾಡುವ ಯೋಜನೆಯನ್ನು ರೂಪಿಸಲು ಇಸ್ರೇಲ್ ಮತ್ತು ವಾಷಿಂಗ್ಟನ್ ಒಪ್ಪಿಕೊಂಡಿದ್ದು, ಅಕ್ಟೋಬರ್ 7 ರಂದು ಹಮಾಸ್ ದಾಳಿಯ ಬಳಿಕ ಅಮೆರಿಕದ ಉನ್ನತ ರಾಜತಾಂತ್ರಿಕ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಎಂಟು ಗಂಟೆಗಳ ಸಭೆಯ ನಂತರ ಬ್ಲಿಂಕನ್ ಈ ವಿಚಾರವನ್ನು ಸ್ಪಷ್ಟಪಡಿಸಿದರು.
ಗಾಜಾ ನಾಗರಿಕರಿಗೆ ಹಾನಿಯಾಗದಂತೆ ಎರಡೂ ಕಡೆಯವರು ಚರ್ಚಿಸುತ್ತಿರುವುದಾಗಿ ತಿಳಿಸಿದರು. ಜೋ ಬಿಡೆನ್ ನಿರ್ಣಾಯಕ ಸಮಯದಲ್ಲಿ ಇಸ್ರೇಲ್‌ಗೆ ಬರುತ್ತಿದ್ದು, ಗಾಜಾದ ಮೇಲೆ ನೆಲದ ಮೇಲೆ ದಾಳಿ ನಡೆಸಲು ಸಿದ್ಧ ಇಸ್ರೇಲ್ ಸಿದ್ದವಿದ್ದು ಅಲ್ಲಿ ನಾಗರೀಕರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದುರೂ ಮುಖ್ಯ ಎಂದರು. ಟೆಲ್ ಅವಿವ್‌ನಲ್ಲಿರುವ ಬ್ಲಿಂಕನ್, ಗಾಜಾಕ್ಕೆ ನೆರವು ನೀಡುವ ಕುರಿತು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಒಪ್ಪಂದಕ್ಕೆ ಬಂದಿವೆ ಎಂದು ಘೋಷಿಸಿದರು.