Wednesday, September 27, 2023

Latest Posts

ಪಾಕಿಸ್ತಾನದ ಭಾರತದ ಹೈಕಮಿಷನ್‌ ಕಚೇರಿಯ ನೂತನ ಮುಖ್ಯಸ್ಥೆಯಾಗಿ ಗೀತಿಕಾ ಶ್ರೀವಾಸ್ತವ ನೇಮಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯ ನೂತನ ಮುಖ್ಯಸ್ಥೆಯಾಗಿ ಗೀತಿಕಾ ಶ್ರೀವಾಸ್ತವ (Geetika Srivastava) ನೇಮಕಗೊಂಡಿದ್ದಾರೆ.

ಪಾಕಿಸ್ತಾನದ ರಾಯಭಾರ ಯೋಜನೆಗೆ ಮೊದಲ ಬಾರಿಗೆ ಮಹಿಳಾ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (MEA) ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ .

ವಿದೇಶದಲ್ಲಿ ರಾಯಭಾರಿ ಅಥವಾ ಹೈಕಮಿಷನರ್ ಇಲ್ಲದೆ ಇರುವಾಗ ರಾಯಭಾರ ಯೋಜನೆಯ ತಾತ್ಕಾಲಿಕ ಹೊಣೆಗಾರಿಕೆಯನ್ನು ಈ ಹುದ್ದೆಗೆ ನೀಡಲಾಗುತ್ತದೆ. ಇಸ್ಲಾಮಾಬಾದ್ ಮತ್ತುದೆಹಲಿಯಲ್ಲಿನ ಭಾರತ ಮತ್ತು ಪಾಕಿಸ್ತಾನಿ ಮಿಷನ್‌ಗಳು ಆಗಸ್ಟ್ 2019 ರಿಂದ ಹೈಕಮಿಷನರ್‌ಗಳಿಲ್ಲದೆ ಮತ್ತು ಆಯಾ ಚಾರ್ಜ್ ʻಡಿ’ಅಫೇರ್‌ಗಳ ನೇತೃತ್ವದಲ್ಲಿದೆ. ಅಜಯ್ ಬಿಸಾರಿಯಾ ಇಸ್ಲಾಮಾಬಾದ್‌ಗೆ ಕೊನೆಯ ಭಾರತೀಯ ಹೈ ಕಮಿಷನರ್ ಆಗಿದ್ದರು.

ಗೀತಿಕಾ ಶ್ರೀವಾಸ್ತವ, 2005ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಯಾಗಿದ್ದರು. ಇಸ್ಲಾಮಾಬಾದ್‌ನ ಸಿಡಿಎ (Charge d’Affaires) ನೂತನ ಮುಖ್ಯಸ್ಥರಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!