August 11, 2026
Tuesday, August 11, 2026
spot_img

ಸ್ಮಾರ್ಟ್‌ ಫೋನ್‌ ಬಿಟ್ಹಾಕಿ ಕೀ ಪ್ಯಾಡ್‌ ಫೊನ್‌ನತ್ತ ಮುಖ ಮಾಡ್ತಿದ್ದಾರೆ Gen Z, ಸೋಶಿಯಲ್‌ ಮೀಡಿಯಾ ಬೇಡ್ವೇ ಬೇಡವಂತೆ!

ಫೋನ್‌ ಇಷ್ಟವೇ ಇಲ್ಲದ ಮಿಲೇನಿಯಲ್ಸ್‌ ಹಾಗೂ ಬೂಮರ್ಸ್‌ ಜನರೇಷನ್‌ಗೆ ಸ್ಮಾರ್ಟ್‌ ಫೋನ್‌ ಹುಚ್ಚು ಹೆಚ್ಚಿಸಿದ Gen Z ಇದೀಗ ತಣ್ಣಗೆ ಕೀ ಪ್ಯಾಡ್‌ ಫೋನ್‌ನತ್ತ ಮುಖ ಮಾಡ್ತಿದೆ. ಎಲ್ಲ ಜನರೇಷನ್‌ಗಳಿಗಿಂತಲೂ ಈ ಜನರೇಷನ್‌ ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ತುತ್ತಾಗ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಫೋನ್. ಮೊಬೈಲ್‌ನ ಕೆಲಸ ಏನು? ಕಮ್ಯುನಿಕೇಷನ್‌! ಅದಕ್ಕೆ ಕೀ ಪ್ಯಾಡ್‌ ಹಾಗೂ ಫ್ಲಿಪ್‌ ಫೋನ್‌ ಸಾಕಾಗುತ್ತದೆ ಎಂದು Gen Z ಕೀ ಪ್ಯಾಡ್‌ ಫೋನ್‌ಗಳನ್ನು ಖರೀದಿ ಮಾಡ್ತಿದ್ದಾರೆ. ಬ್ಲರ್‌ ಆದ ಫೋಟೊಗಳನ್ನು ಏಸ್ತಟಿಕ್ಸ್‌ ಎಂದು ಇಷ್ಟಪಡ್ತಿದ್ದಾರೆ. ಕೆಲವು ದಿನಗಳ ಹಿಂದೆ ಯಾವುದೋ ವಿಡಿಯೋ ಒಂದರಲ್ಲಿ ʼಇನ್ನು ಕೆಲವು ವರ್ಷಗಳಲ್ಲಿ ಜನ ಫೋನ್‌ ಬಿಟ್ಟು ರಿಯಲ್‌ ಕನೆಕ್ಷನ್‌ ಮುಖ್ಯ ಅನ್ನೋದನ್ನು ಅರಿತುಕೊಳ್ತಾರೆ. ಫೋನ್‌ ಬದಿಗೆಸೆದು ಹೊರಕ್ಕೆ ಬರ್ತಾರೆʼ ಎಂದು ಹೇಳ್ತಿದ್ದರು. ಅದೇ ರೀತಿ ಆಗಬಹುದಾ ಎನ್ನುವ ಹೋಪ್‌ ಕಿಟಕಿಯಿಂದ ಮನೆಪ್ರವೇಶಿಸುತ್ತಿದೆ.

ಈ ನಿರ್ಧಾರ ಯಾಕೆ?

ಡಿಜಿಟಲ್‌ ಡೀಟಾಕ್ಸ್‌ನ ಹೆಸರಿನಲ್ಲಿ Gen Z ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಿಟ್ಟು ಕೀ ಪ್ಯಾಡ್‌ ಫೋನ್‌ಗಳತ್ತ ಶಿಫ್ಟ್‌ ಆಗ್ತಿದ್ದಾರೆ. ಕೈಗೆ ಕಂಟ್ರೋಲ್‌ ಇಲ್ಲದಂತೆ ಸ್ಕ್ರೋಲ್‌ ಮಾಡುವುದು, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯನ್ನು ನಿಲ್ಲಿಸೋದಕ್ಕೆ ಈ ದಾರಿ ಕಂಡುಕೊಂಡಿದ್ದಾರೆ.

ಸ್ಮಾರ್ಟ್‌ ಫೋನ್‌ನಲ್ಲಿ ಬರುವ ಸಾವಿರ ನೋಟಿಫಿಕೇಷನ್ಸ್‌ Gen Zಗಳ ನಿದ್ದೆಗೆಡಿಸಿದೆ. ಒಂದು ನೋಟಿಫಿಕೇಷನ್‌ ಓಪನ್‌ ಮಾಡಿದರೆ ಮತ್ತೆ ಒಂದು ಗಂಟೆ ವೇಸ್ಟ್‌ ಆಗುತ್ತಿದೆ. ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಜಗತ್ತಿನಲ್ಲಿ ನೂರಾರು ಕೆಟ್ಟ ವಿಷಯಗಳು ನಡೆಯುತ್ತವೆ. ಆದರೆ ಯಾರೂ ತಲೆ ಕೆಡಿಸಿಕೊಳ್ಳೋದಿಲ್ಲ. ಅದೇ ಕೆಟ್ಟ ಘಟನೆ ನಮ್ಮ ಪಕ್ಕದ ಮನೆಯಲ್ಲಿ ನಡೆದರೆ ಮಾತ್ರ ಅಲರ್ಟ್‌ ಆಗುತ್ತೇವೆ. ಕೈಯಲ್ಲಿ ಫೋನ್‌ ಇದ್ದರೆ ದೂರದ ದೇಶದಲ್ಲಿ ಆದ ಸಮಸ್ಯೆಯೊಂದು ನಿದ್ದೆಗೆಡಿಸುವಂತೆ ಮಾಡುತ್ತದೆ. ಇದೆಲ್ಲದರಿಂದ Gen Zಗೆ ಬ್ರೇಕ್‌ ಬೇಕಿದೆ.

ಬೇಸಿಕ್‌ ಫೋನ್‌ಗಳಲ್ಲಿ ಟ್ರಾಕಿಂಗ್‌ ಇರೋದಿಲ್ಲ. ತಮ್ಮ ಪ್ರೈವೆಸಿ ಬಗ್ಗೆ ಕಂಟ್ರೋಲ್‌ ಇರುತ್ತದೆ. ಇದು ಅವರಿಗೆ ಸುರಕ್ಷತೆಯ ಭಾವನೆ ನೀಡಿದೆ.

ಹಳೆಯ ಫ್ಲಿಪ್‌ ಫೋನ್‌ಗಳು ಮತ್ತೆ ಟ್ರೆಂಡ್‌ ಆಗಿದ್ದು, ಕೆಲವರು ಸುಮ್ಮನೆ ಟ್ರೆಂಡ್‌ ಫಾಲೋ ಮಾಡ್ತಿದ್ದಾರೆ. ಸ್ಕ್ರೀನ್‌ ಒತ್ತುವ ಬದಲು ಬಟನ್‌ಗಳನ್ನು ಒತ್ತೋದು ಸ್ಯಾಟಿಸ್‌ಫ್ಯಾಕ್ಷನ್‌ ನೀಡುತ್ತದೆ ಅಂತಾರೆ Gen Zಗಳು.

ಸಿಂಪಲ್‌ ಮಾಡೆಲ್‌ಗಳು, ಕಡಿಮೆ ಹಣ, ವಿಂಟೇಜ್‌ ಲುಕ್ಸ್‌ Gen Zಗಳಿಗೆ ಇಷ್ಟವಾಗಿದೆ. ತಮ್ಮ ಮಾನಸಿಕ ಆರೋಗ್ಯ, ಕುಟುಂಬದ ಜೊತೆ ಸಮಯ ಕಳೆಯಲು ಹಾಗೂ ಸ್ನೇಹಿತರ ಭೇಟಿಗಾಗಿ ಇದೇ ಬೆಸ್ಟ್‌ ಅನ್ನೋದು Gen Zಗಳ ಅಭಿಪ್ರಾಯವಾಗಿದೆ.

ಇದು ಕಾಲೇಜು ಓದುವ ಅಥವಾ ಸ್ಕೂಲ್‌ ಮಕ್ಕಳಿಗೆ ಸರಿಯಾಗುತ್ತದೆ. ಕೆಲಸಕ್ಕೆ ಹೋಗುವ ನಾವು ನಿತ್ಯವೂ ಫೋನ್‌ ಮೇಲೆ ವಾಟ್ಸಾಪ್‌ ಮೇಲೆ ನಿರ್ಧರಿತರಾಗಿರುತ್ತೀವಿ. ನಮಗೂ ಅದೇ ಹಳೆಯ ಫೋನ್‌ಗಳೇ ಇಷ್ಟ ಆದರೆ ಅನಿವಾರ್ಯ ಎಂದು ಮಿಲೇನಿಯಲ್ಸ್‌ ಹೇಳ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !