ಬೆಂಗಳೂರಿನಲ್ಲಿ ರಸ್ತೆ ಬದಿ ಯುಪಿಐ ಮೂಲಕ ತರಕಾರಿ ಖರೀದಿಸಿದ ಜರ್ಮನಿ ಸಚಿವ, ವ್ಹಾವ್ ಡಿಜಿಟಲ್ ಇಂಡಿಯಾ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜರ್ಮನಿ ಸಚಿವರೊಬ್ಬರ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಬದಿ ತರಕಾರಿ ಖರೀದಿ ಮಾಡಿದ್ದಾರೆ, ಯುಪಿಐ ಮೂಲಕ ಪೇಮೆಂಟ್ ಮಾಡಿದ್ದು, ಡಿಜಿಟಲ್ ಇಂಡಿಯಾವನ್ನು ಶ್ಲಾಘಿಸಿದ್ದಾರೆ.

ಹೌದು, ಜಿ-೨೦ ಶೃಂಗಸಭೆಗಾಗಿ ಜರ್ಮನಿಯ ಸಚಿವರಾದ ವೋಲ್ಕರ್ ವಿಸ್ಸಿಂಗ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ರಸ್ತೆ ಬದಿ ಹಸಿಮೆಣಸಿನ ಕಾಯಿ ಖರೀದಿಸಿ ಯುಪಿಐ ಮೂಲಕ ಹಣ ಟ್ರಾನ್ಸ್‌ವರ್ ಮಾಡಿದ್ದಾರೆ.

ಈ ಬಗ್ಗೆ ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿ ಟ್ವೀಟ್ ಮಾಡಿದ್ದು, ಭಾರತದ ಡಿಜಿಟಲ್ ಮೂಲಸೌಕರ್ಯವನ್ನು ಹಾಡಿ ಹೊಗಳಿದ್ದಾರೆ. ದೇಶದ ಯಶಸ್ಸಿನ ಕಥೆಗಳಲ್ಲಿ ಇಂದೂ ಒಂದು ಎಂದು ಬಣ್ಣಿಸಿದ್ದಾರೆ.

ಡಿಜಿಟಲ್ ಮೂಲಸೌಕರ್ಯ ಭಾರತದ ಯಶಸ್ಸಿನ ಕಥೆ, ಯುಪಿಐ ಮೂಲಕ ಸೆಕೆಂಡುಗಳಲ್ಲಿ ವಹಿವಾಟು ಮುಗಿಯುತ್ತದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಾರೆ. ಫೆಡರಲ್ ಡಿಜಿಟಲ್ ಮತ್ತು ಸಾರಿಗೆ ಸಚಿವ ವಿಸ್ಸಿಂಗ್ ಅವರು ಯುಪಿಐ ಬಳಸಿ ಖರೀದಿ ಮಾಡಿದ್ದಾರೆ. ಇಂಡಿಯಾ ಡಿಜಿಟಲ್ ಕ್ರಾಂತಿಯನ್ನು ಮೆಚ್ಚಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!