Tuesday, October 3, 2023

Latest Posts

‘ಇಂಡಿಯಾ ಡೇ ಪರೇಡ್’ನಲ್ಲಿ ನಟಿ ಸಮಂತಾ ಮತ್ತು ಜಾಕ್ವೆಲಿನ್ ಭಾಗಿ: ರಾರಾಜಿಸಿದ ತ್ರಿವರ್ಣ ಧ್ವಜ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದ ಅತಿದೊಡ್ಡ ‘ಇಂಡಿಯಾ ಡೇ ಪರೇಡ್’ ಭಾನುವಾರ ಮಧ್ಯಾಹ್ನ ನ್ಯೂಯಾರ್ಕ್ ನಗರದಲ್ಲಿ ಪ್ರಾರಂಭವಾಯಿತು, ಈ ವೇಳೆ  ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರು ಮೆರವಣಿಗೆಯಲ್ಲಿ ಭಾಗಿಯಾದರು. ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್, ನಟಿ ಸಮಂತಾ ರುತ್ ಪ್ರಭು, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ ಸೇರಿದಂತೆ ಡಯಾಸ್ಪೋರಾದ ಹಲವಾರು ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Jacqueline Fernandez, Samantha Ruth Prabhu Participate In India Day Parade  In New York City (WATCH)

ಮೆರವಣಿಗೆಯು ನ್ಯೂಯಾರ್ಕ್‌ನ 38 ನೇ ಬೀದಿ ಮತ್ತು ಮ್ಯಾಡಿಸನ್ ಅವೆನ್ಯೂದಲ್ಲಿ ಮಧ್ಯಾಹ್ನ 12 ಗಂಟೆಗೆ (ಸ್ಥಳೀಯ ಸಮಯ) ಪ್ರಾರಂಭವಾಯಿತು. ಅನೇಕ ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿದರು. ಪ್ರದರ್ಶಕರು ನೃತ್ಯ ಮತ್ತು ಡ್ರಮ್ಸ್ ನುಡಿಸುತ್ತಾ, ಮೆರವಣಿಗೆಯು ಭಾರತ ಮತ್ತು ಅಮೆರಿಕವನ್ನು ಒಂದುಗೂಡಿಸುವ ಸಂಸ್ಕೃತಿ, ದೇಶಭಕ್ತಿಯನ್ನು ಹೊರಸೂಸಿತ್ತು.

Sri Sri Ravi Shankar, Samantha Ruth Prabhu, Jacqueline Fernandez to  headline FIA India Day Parade in NYC

ಪರೇಡ್ ವೇಳೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಭಾರತೀಯ ತ್ರಿವರ್ಣ ಧ್ವಜವನ್ನು ಬೀಸುತ್ತಿದ್ದರು. ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡರು. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹಂಚಿಕೊಂಡಿವೆ ಮತ್ತು “ಜಾಗತಿಕ ಒಳಿತಿಗಾಗಿ ಶಕ್ತಿ” ಆಗಲು ಬಯಸುತ್ತಾರೆ ಎಂದು ಹೇಳಿದರು.

Watch video: Jacqueline Fernandez participates in India Day Parade in New  York - India Today

ಈ ವರ್ಷದ ಟ್ಯಾಗ್‌ಲೈನ್ “ಮಿಷನ್ ಲೈಫ್”, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಸಾಮೂಹಿಕ ಚಳವಳಿಯ ಹೆಸರನ್ನೇ ಇಡಲಾಗಿತ್ತು.
ಮೆರವಣಿಗೆ ಬಗ್ಗೆ ಮಾತನಾಡಿದ ನಟಿ ಸಮಂತಾ..”ಇಂದು ನಾನು ಇಲ್ಲಿರುವುದು ನಿಜವಾಗಿಯೂ ನನಗೆ ಗೌರವವಾಗಿದೆ. ನನ್ನ ಸಂಸ್ಕೃತಿ ಮತ್ತು ಪರಂಪರೆ ಎಷ್ಟು ಶ್ರೀಮಂತವಾಗಿದೆ ಎಂದು ಇಲ್ಲಿ ನಾನು ನೋಡಿರುವುದು ನನ್ನ ಜೀವಿತಾವಧಿಯಲ್ಲಿ ಉಳಿಯುತ್ತದೆʼ. ಎಂದರು.

 

India Day Parade' in New York - News18

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!