ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜರ್ಮನ್ ಓಪನ್ ಟೂರ್ನಿಯಲ್ಲಿ ಭಾರತದ ಪಿ.ವಿ. ಸಿಂಧು ಎರಡನೇ ಸುತ್ತಿನಲ್ಲಿ ಆಘಾತಕಾರಿ ಸೋಲುಂಡಿದ್ದಾರೆ. ಆದರೆ
ಕೆ. ಶ್ರೀಕಾಂತ್ ಕಠಿಣ ಸವಾಲು ಎದುರಿಸಿದರೂ ಗೆಲುವು ದಾಖಲಿಸಿದ್ದಾರೆ.
7ನೇ ಶ್ರೇಯಾಂಕದ ಸಿಂಧು ತಮಗಿಂತ ತುಂಬಾ ಕೆಳಶ್ರೇಯಾಂಕ ಹೊಂದಿರುವ ಚೀನಾದ ಝಾಂಗ್ ಇ ಮಾನ್ ವಿರುದ್ಧ ಸೋಲು ಕಂಡರು. ಸಿಂಧು 14-21, 21-15, 14-21 ಸೆಟ್‌ಗಳಲ್ಲಿ ಪಂದ್ಯ ಸೋತರು.
ಮುಂದಿನ ವಾರವಷ್ಟೇ ಅತ್ಯಂತ ಮಹತ್ವದ ಆಲ್ ಇಂಗ್ಲೆಂಡ್ ಚಾಂಪ್ಯನ್‌ಶಿಪ್ ನಡೆಯಲಿರುವ ಹಿನ್ನೆಲೆಯಲ್ಲಿ ಸಿಂಧುಗೆ ಇದು ದೊಡ್ಡ ಹಿನ್ನಡೆಯೇ ಸರಿ. ಅವರು ತಮ್ಮ ಆತ್ಮವಿಶ್ವಾಸ ಕುಂದದಂತೆ ನೋಡಿಕೊಳ್ಳಬೇಕಾಗಿದೆ.
ಇದೇವೇಳೆ, ಪುರುಷರ ವಿಭಾಗದಲ್ಲಿ ಕೆ.ಶ್ರೀಕಾಂತ್ ಚೀನಾದ ಲು ಗುವಾಂಜ್‌ರಿಂದ ಕಠಿಣ ಸವಾಲು ಎದುರಿಸಿದರೂ ಗೆಲುವು ಸಾಧಿಸಲು ಸಫಲರಾದರು. ಮೊದಲ ಸೆಟ್ 21-16ರಿಂದ ಗೆದ್ದ ಶ್ರೀಕಾಂತ್ ಎರಡನೇ ಸೆಟ್ 21-23ರಿಂದ ಕಳಕೊಳ್ಳಬೇಕಾಯಿತು. ಮೂರನೇ ನಿರ್ಣಾಯಕ ಸೆಟ್‌ನಲ್ಲಿ ಅವರು 21-18ರಿಂದ ಜಯ ಸಾಧಿಸಿದರು.