Thursday, August 11, 2022

Latest Posts

ಜರ್ಮನ್‌ ಶೆಪರ್ಡ್‌ ನಾಯಿ ಅರೆಸ್ಟ್!‌ ಬಿಹಾರದಲ್ಲೊಂದು ವಿಚಿತ್ರ ಘಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಿಹಾರದ ಅಬಕಾರಿ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಜರ್ಮನ್ ಶೆಫರ್ಡ್ ಹೆಣ್ಣು ನಾಯಿಯನ್ನು ಬಂಧಿಸಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಬಕ್ಸಾರ್‌ನಲ್ಲಿರುವ ಮಫಸಿಲ್ ಪೊಲೀಸರು ನಾಯಿಯನ್ನು ಅರೆಸ್ಟ್‌ ಮಾಡಿದ್ದಾರೆ.

ಎಂದಿನಂತೆ ತಪಾಸಣೆ ನಡೆಸುತ್ತಿದ್ದ ಪೋಲೀಸರು ಜುಲೈ 6ರಂದು ಉತ್ತರ ಪ್ರದೇಶದ ಗಾಜಿಪುರದಿಂದ ಬರುತ್ತಿದ್ದ ಎಸ್‌ಯುವಿಯನ್ನು ತಡೆಹಿಡಿದು ತಪಾಸಣೆ ನಡೆಸಿದ್ದರು. ಈ ವೇಳೆ ವಾಹನದಲ್ಲಿ ಆರು ಐಎಂಎಫ್‌ಎಲ್‌(ಒಂದು ಬಗೆಯ ಮದ್ಯ) ಬಾಟಲಿಗಳು ದೊರಕಿದ್ದವು. ಕುಡಿದ ಅಮಲಿನಲ್ಲಿದ್ದ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಬಿಹಾರದ ಅಬಕಾರಿ ಮತ್ತು ನಿಷೇಧ ಕಾಯ್ದೆಯ ಸೆಕ್ಷನ್ 57 ರ ಅಡಿಯಲ್ಲಿ ವಾಹನವನ್ನು ಜಪ್ತಿ ಮಾಡಲಾಗಿದೆ.

ಇವರೊಂದಿಗೆ ಸೆಕ್ಷನ್ 56(2)ರ ಅಡಿಯಲ್ಲಿ ವಾಹನದಲ್ಲಿ ಪತ್ತೆಯಾದ ಪ್ರಾಣಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ, ನಾಯಿ ಪ್ರಸ್ತುತ ಮಫಸ್ಸಿಲ್ ಪೊಲೀಸ್ ಠಾಣೆಯಲ್ಲಿದೆ. ನಾಯಿಗೆ ಕೇವಲ ಇಂಗ್ಲೀಷಿನ ಸಂಜ್ಞೆಗಳು ಅರ್ಥವಾಗುತ್ತಿದ್ದರಿಂದ ಸ್ಥಳೀಯ ಇಂಗ್ಲೀಷ್‌ ಬಲ್ಲ ವ್ಯಕ್ತಿಯ ಸಹಾಯದಿಂದ ಪೋಲೀಸರು ನಾಯಿಯನ್ನು ಬಂಧಿಸಿದರು ಎನ್ನಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss