ಫುಡ್ ಡೆಲಿವರಿ ವೇಳೆ ನಾಯಿಗೆ ಹೆದರಿ 3ನೇ ಮಹಡಿಯಿಂದ ಜಿಗಿದ ಗ್ಗಿ ಡೆಲಿವರಿ ಬಾಯ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಡ್ ಡೆಲಿವರಿಗೆ ವೇಳೆ ನಾಯಿಗೆ ಹೆದರಿ ಸ್ವಿಗ್ಗಿ ಡೆಲಿವರಿ ಬಾಯ್ 3ನೇ ಮಹಡಿಯಿಂದ ಜಿಗಿದ ಘಟನೆ ನಡೆದಿದೆ.

ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಮನೆಯೊಳಗಿದ್ದ ನಾಯಿ ಜೋರಾಗಿ ಬೊಗಳುತ್ತಾ ಹೊರಗೆ ಬಂದಿತು. ಆಗ ಹೆದರಿದ ಡೆಲಿವರಿ ಬಾಯ್ ಕೆಳಗೆ ಹಾರಿ ಬಿದ್ದಿದ್ದಾರೆ.

ಮೇಲಿನಿಂದ ಬಿದ್ದಿದ್ದರಿಂದ ಅವರಿಗೆ ಗಂಭೀರ ಗಾಯಗಳಾಗಿವೆ. ಆತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಸ್ವಿಗ್ಗಿ ಡೆಲಿವರಿ ಏಜೆಂಟ್ 25 ವರ್ಷದ ರಿಜ್ವಾನ್ ಕಳೆದ 3 ವರ್ಷಗಳಿಂದ ಸ್ವಿಗ್ಗಿಯೊಂದಿಗೆ ಕೆಲಸ ಮಾಡುತ್ತಿದ್ದರು.

ಫ್ಲಾಟ್ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ರಿಜ್ವಾನ್​ನ ಸಹೋದರ ಗುರುವಾರ ರಾತ್ರಿ ಬಂಜಾರಾ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!