ರಷ್ಯಾದ 40 ಯುದ್ಧವಿಮಾನಗಳನ್ನು ಹೊಡೆದುರುಳಿಸಿದ ʼಘೋಸ್ಟ್‌ ಆಫ್‌ ಕೀವ್ʼ ಹುತಾತ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಕಾಂಗಿಯಾಗಿ ಶತ್ರುರಾಷ್ಟ್ರ ರಷ್ಯಾದ ಬರೊಬ್ಬರಿ 40 ಯುದ್ಧವಿಮಾನಗಳನ್ನು ಹೊಡೆದುರುಳಿಸುವ ಮೂಲಕ ʼಘೋಸ್ಟ್‌ ಆಫ್‌ ಕೀವ್ʼ ಎಂದು ಪ್ರಖ್ಯಾತನಾಗಿದ್ದ ಉಕ್ರೇನ್‌ನ ಯೋಧ ಕೊನೆಗೂ ಯುದ್ಧದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಆತನ ಸಾವಿನ ಕುರಿತು ಊಹಾಪೋಹಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಉಕ್ರೇನ್‌ ಆತ ಹುತಾತ್ಮನಾಗಿರುವುದನ್ನು ದೃಢಪಡಿಸಿದೆ.

ರಷ್ಯಾವು ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ ಮರುದಿನವೇ ಒಂದೇ ದಿನ 6 ರಷ್ಯಾ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ʼಘೋಸ್ಟ್‌ ಆಫ್‌ ಕೀವ್‌ʼ (ಕೀವ್‌ ನ ಭೂತ) ಎಂದು ಆತ ಪ್ರಸಿದ್ಧನಾಗಿದ್ದ. ಆತನ್ನು ಉಕ್ರೆನ್‌ ನ ʼರಕ್ಷಕ ದೇವತೆʼ (ಗಾರ್ಡಿಯನ್‌ ಏಂಜೆಲ್)‌ ಎಂದೇ ಜನ ನಂಬಿದ್ದರು. ರಷ್ಯಾದ 3-4 ಯುದ್ಧವಿಮಾನಗಳನ್ನು ಏಕಾಂಗಿಯಾಗಿ ಅಟ್ಟಿಸಿಕೊಂಡು ಹೋಗುತ್ತಿದ್ದ ಆತನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.

ಆದರೆ ಯುದ್ಧದಲ್ಲಿ ಆತನ ಮರಣವಾಗಿರುವುದನ್ನು ಉಕ್ರೇನ್‌ ದೃಢಪಡಿಸಿದೆ. 29 ವರ್ಷದ ಆತನನ್ನು ಮೇಜರ್ ಸ್ಟೆಪನ್ ತಾರಾಬಾಲ್ಕ ಎಂದು ಗುರುತಿಸಲಾಗಿದ್ದು ಉಕ್ರೇನ್ ಸೇನೆಯಲ್ಲಿ ಕೊಡಮಾಡುವ ಅತ್ಯುನ್ನತ ಸೇನಾ ಗೌರವವನ್ನು ನೀಡಿ ಗೌರವಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!