ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ಗುಲಾಂ ನಬಿ ಆಜಾದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಮುಂಬರುವ ಲೋಕಸಭಾ ಚುನಾವಣೆಯಿಂದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (DPAP) ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಹಿಂದೆ ಸರಿದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ (Anantnag-Rajouri) ಲೋಕಸಭಾ ಕ್ಷೇತ್ರದಿಂದ ಗುಲಾಂ ನಬಿ ಆಜಾದ್ (Ghulam Nabi Azad) ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ಪಕ್ಷ ತಿಳಿಸಿದೆ.

ಆಜಾದ್ ಅವರು ಹಿಂದೆ ಸರಿದ ಬಳಿಕ ಇದೀಗ ಮೊಹಮ್ಮದ್ ಸಲೀಂ ಪರ್ರೆ ಅನಂತನಾಗ್-ರಾಜೌರಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಬಹುದು ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಕಾಶ್ಮೀರದ ಡಿಪಿಎಪಿಯ ಪ್ರಾಂತೀಯ ಅಧ್ಯಕ್ಷ ಮೊಹಮ್ಮದ್ ಅಮೀನ್ ಭಟ್ ಮಾತನಾಡಿ, ಈ ಬೆಳವಣಿಗೆಯನ್ನು ಆಜಾದ್ ಖಚಿತಪಡಿಸಿದ್ದಾರೆ. ಅವರು ಲೋಕಸಭಾ ಚುನಾವಣೆಗೆ (Loksabha Elections 2024) ಸ್ಪರ್ಧಿಸುವುದಿಲ್ಲ. ಹೀಗಾಗಿ ಅನಂತನಾಗ್-ರಜೌರಿ ಕ್ಷೇತ್ರಕ್ಕೆ ವಕೀಲ ಸಲೀಂ ಪರ್ರೆ ಡಿಪಿಎಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದರು.

ಆಜಾದ್ ಅವರು 2022 ರಲ್ಲಿ ಕಾಂಗ್ರೆಸ್ ತೊರೆದರು. ಈ ಮೂಲಕ ಪಕ್ಷದೊಂದಿಗಿನ ಐದು ದಶಕಗಳ ಸಂಬಂಧವನ್ನು ಕೊನೆಗೊಳಿಸಿದರು. ಬಳಿಕ ಡಿಪಿಎಪಿಯನ್ನು ಸೇರಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!