GIF Image ಸೃಷ್ಟಿಕರ್ತ ಸ್ಟೀಫನ್ ವಿಲ್ಹೈಟ್ ಕೊರೋನಾ ಸೋಂಕಿಗೆ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲೂಪಿಂಗ್ ಅನಿಮೇಟೆಡ್ ಜಿಐಎಫ್ ಇಮೇಜ್‌(GIF Image) ಸೃಷ್ಟಿಕರ್ತರಲ್ಲಿ ಒಬ್ಬರಾದ ಸ್ಟೀಫನ್ ವಿಲ್ಹೈಟ್ (74) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೋನಾ ಸೋಂಕಿಗೆ ಒಳಗಾಗಿದ್ದ ಸ್ಟೀಫನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ತೀವ್ರ ನಿಗಾ ಘಟಕದಲ್ಲಿ ಇರಿಸುವ ಮೊದಲು ಆಂಟಿಬಯೋಟಿಕ್‌ಗಳೊಂದಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಇಂದು ವಿಧಿವಶರಾಗಿದ್ದಾರೆ.
ಸ್ಟೀಫನ್ ವಿಲ್ಹೈಟ್ ಜಿಐಎಫ್ ಅಥವಾ ಗ್ರಾಫಿಕ್ಸ್ ಇಂಟರ್ಚೇಂಜ್ ಫಾರ್ಮ್ಯಾಟ್‌ನ ಪ್ರಮುಖ ಆವಿಷ್ಕಾರಕರಲ್ಲಿ ಒಬ್ಬರಾಗಿದ್ದು, ಈಗ ಅವುಗಳನ್ನ ಪ್ರತಿಕ್ರಿಯೆಗಳು, ಸಂದೇಶ ಮತ್ತು ಹಾಸ್ಯಗಳಿಗೆ ಬಳಸಲಾಗುತ್ತದೆ. ಅವರು 1980ರ ದಶಕದಲ್ಲಿ ಕಾಂಪುಸರ್ವ್ʼನಲ್ಲಿ ಕೆಲಸ ಮಾಡುವಾಗ ಜಿಐಎಫ್ ರಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!