ದಿನಭವಿಷ್ಯ| ಶುಕ್ರವಾರದ ರಾಶಿಫಲ ಹೀಗಿದೆ

ಮೇಷ
ನಿಮ್ಮ ಕಾರ್ಯವೈಖರಿ ಕೆಲವರಿಗೆ ಅಸಮಾಧಾನ ಸೃಷ್ಟಿಸಬಹುದು. ಎಲ್ಲ ರನ್ನು ಮೆಚ್ಚಿಸುವುದು ಸುಲಭವಲ್ಲ ಎಂಬುದು ನಿಮಗೆ ಅರಿವಾಗುತ್ತದೆ. ಆರ್ಥಿಕ ಬಿಕ್ಕಟ್ಟು.

ವೃಷಭ
ಸಹೋದ್ಯೋಗಿಗಳ ಸಹಕಾರ. ಇದರಿಂದ ನಿಮ್ಮ ಕಾರ್ಯ ಸಲೀಸು.  ಒತ್ತಡವನ್ನೂ ಸರಾಗವಾಗಿ ನಿಭಾಯಿಸುವಿರಿ. ಕೌಟುಂಬಿಕ ನೆಮ್ಮದಿ.

ಮಿಥುನ
ಖಾಸಗಿ ಬದುಕಿನಲ್ಲಿ ಹೊಸ ಸವಾಲು ಎದುರಿಸುವಿರಿ.ವೃತ್ತಿಯಲ್ಲಿಯೂ ಸಂಕಷ್ಟ. ಎರಡೂ ಕಡೆ ಹೊಂದಾಣಿಕೆಯಿಂದ ನಿಭಾಯಿಸಬೇಕು.

ಕಟಕ
ದೈನಂದಿನ ಕಾರ್ಯದ ಜತೆಗೇ ಹೆಚ್ಚುವರಿ ಹೊಣೆಗಾರಿಕೆ. ಇತರರ ಕೆಲಸದ ಹೊರೆಯನ್ನು ನೀವು ಹೊತ್ತುಕೊಳ್ಳ ಬೇಕಾಗುವುದು. ಆರ್ಥಿಕ ಸುಧಾರಣೆ.

ಸಿಂಹ
ಕುಟುಂಬ ಸದಸ್ಯರೊಂದಿಗೆ ಹೆಚ್ಚು ಕಾಲ ಕಳೆಯುವ ಅವಕಾಶ. ಪ್ರವಾಸ ಹೊರಡಲು ಸೂಕ್ತ ಕಾಲ. ಆರ್ಥಿಕ ಹೊರೆಯೇನೂ ನಿಮಗೆ ಬಾಧಿಸದು.

ಕನ್ಯಾ
ಭವಿಷ್ಯಕ್ಕೆ ಉತ್ತಮ ಯೋಜನೆ ರೂಪಿಸಿ ಕಾರ್ಯಗತಗೊಳಿಸಿ. ಅದು ಸಫಲವಾಗುವುದು ನಿಶ್ಚಿತ.ನಿಮ್ಮ ಕುರಿತಾದ ವಿರೋಧಗಳು ನಿವಾರಣೆಯಾಗುತ್ತವೆ.

ತುಲಾ
ಕೆಲವು ಗೊಂದಲ  ಮಯ ಸ್ಥಿತಿ ಉದ್ಭವಿಸಬಹುದು. ನಿಮ್ಮ ಕುರಿತಂತೆ ಹಾಗೂ ಇತರರ ಕುರಿತಂತೆ ಸಹನೆಯನ್ನು ಕಾಯ್ದುಕೊಳ್ಳಿ.

ವೃಶ್ಚಿಕ
ಕೌಟುಂಬಿಕ ಬಿಕ್ಕಟ್ಟು.ನಿಮ್ಮ ಹೊಣೆಗಾರಿಕೆ ನಿಭಾಯಿಸುವುದೂ ಕೂಡ ವಿವಾದ ಸೃಷ್ಟಿಸಬಹುದು.ನಿಮ್ಮ ಕುರಿತಂತೆ ಕೆಲವರು ಟೀಕೆ ಮಾಡುತ್ತಾರೆ.

ಧನು
ಕೆಲಸದಲ್ಲಿ ಎದುರಿಸುತ್ತಿದ್ದ ಒತ್ತಡವು ಇಂದು ನಿಧಾನವಾಗಿ ಕಡಿಮೆಯಾಗಲಿದೆ.ಹಾಗೆಂದು ಸಂಪೂರ್ಣ ನಿರಾಳವಾಗಿರುವಂತಿಲ್ಲ. ಸಮಸ್ಯೆ ಇನ್ನೂ ಇದೆ.

ಮಕರ
ನಿಮ್ಮ ಕುರಿತಂತೆ ನಿಮಗೇ ಅಪನಂಬಿಕೆ. ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲದ ಮೇಲೆ ಕೆಲಸಗಳು ಸಫಲ ವಾಗುವುದು ಹೇಗೆ? ಯೋಚಿಸಿ.

ಕುಂಭ
ವೃತ್ತಿಯಲ್ಲಿ ಹೊಸ ಸವಾಲು. ಕೆಲವರಿಂದ ಅಸಹಕಾರ. ನಿಮ್ಮನ್ನು ಕಡೆಗಣಿಸಲು ಕೆಲವರು ಯತ್ನಿಸುವರು. ನಿಮ್ಮ ಮೇಲೆ ಪೂರ್ಣ ವಿಶ್ವಾಸವಿಡಿ.

ಮೀನ
ಪ್ರೀತಿ, ದ್ವೇಷ ಎರಡೂ ಭಾವಗಳನ್ನು ಸಮಾನವಾಗಿ ಅನುಭವಿಸುವಿರಿ. ಮಾತಿನ ಮೇಲೆ ನಿಯಂತ್ರಣವಿರಲಿ. ಸಂಬಂಧ ಕೆಡದಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!