October 14, 2026
Wednesday, October 14, 2026
spot_img

ಗಮನಿಸಿ, ಇಂದು ಯಾವ ಡೆಲಿವರಿನೂ ಬರೋದಿಲ್ಲ! ಮುಷ್ಕರ ಆರಂಭಿಸಿದ ಗಿಗ್‌ ವರ್ಕರ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಟ್ರೋಲ್‌ ಹಾಗೂ ಡಿಸೇಲ್‌ ದರ ಹೆಚ್ಚಳದ ಬೆನ್ನಲ್ಲೇ ದೇಶಾದ್ಯಂತ ಗಿಗ್‌ ಕಾರ್ಮಿಕರು ಮುಷ್ಕರ ಆರಂಭಿಸಿದ್ದಾರೆ.

ಇಂದು ಸತತ ಐದು ಗಂಟೆಗಳ ಕಾಲ ಗಿಗ್‌ ವರ್ಕರ್ಸ್‌ ಡೆಲಿವರಿ ನಿಲ್ಲಿಸಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್‌ ಹಾಗೂ ಡಿಸೇಲ್‌ ದರ ಹೆಚ್ಚಾಗಿದೆ. ನಮ್ಮ ಕೆಲಸಕ್ಕೆ ಪೆಟ್ರೋಲ್‌ ಡಿಸೇಲ್‌ ಬೇಕೇಬೇಕು. ಸಂಬಳದಲ್ಲಿ ಪೆಟ್ರೋಲ್‌ ಡೀಸೆಲ್‌ ಹಾಕಿಸಿಕೊಂಡು ಕೂತರೆ ಜೀವನ ಹೇಗೆ ಮಾಡೋದು ಎಂದು ಗಿಗ್‌ ವರ್ಕರ್ಸ್‌ ಗರಂ ಆಗಿದ್ದಾರೆ.

ಕಾರ್ಮಿಕ ಸಂಘಟನೆಗಳು ಪೆಟ್ರೋಲ್‌ ಹಾಗೂ ಡಿಸೇಲ್‌ ದರ ಇಳಿಕೆ ಮಾಡಿ ಎಂದು ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ಮಧ್ಯಾಹ್ನ 12:00 ರಿಂದ ಸಂಜೆ 5:00ರವರೆಗೆ ಎಲ್ಲ ಗಿಗ್‌ ವರ್ಕರ್ಸ್‌ ತಮ್ಮ ಅಪ್ಲಿಕೇಷನ್‌ಗಳು ಆಫ್‌ಲೈನ್‌ನಲ್ಲಿ ಇಡಲಿದ್ದಾರೆ. ಇದರಿಂದ ಡೆಲಿವರಿ ಸಾಧ್ಯವಾಗುವುದಿಲ್ಲ.

Must Read