ಗಿಲ್ ಆಕರ್ಷಕ ಸೆಂಚುರಿ: ನ್ಯೂಜಿಲೆಂಡ್ ಗೆಲುವಿಗೆ ಬೃಹತ್ ಟಾರ್ಗೆಟ್ ಕೊಟ್ಟ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲೆಂಡ್ ವಿರುದ್ದದ ಅಂತಿಮ ಟಿ20 ಪಂದ್ಯದಲ್ಲಿ ಶುಭಮನ್ ಗಿಲ್ ಆಕರ್ಷಕ ಸೆಂಚುರಿ, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನೆರವಿನಿಂದ ಭಾರತ 4 ವಿಕೆಟ್ ನಷ್ಟಕ್ಕೆ 234 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಶುಭಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾಟದಿಂದ ಟೀಂ ಇಂಡಿಯಾ ಉತ್ತಮ ಹೋರಾಟ ನೀಡಿತು.

ರಾಹುಲ್ ತ್ರಿಪಾಠಿ 22 ಎಸೆತದಲ್ಲಿ 44 ರನ್ ಸಿಡಿಸಿ ಔಟಾದರು. ಆದರೆ ಗಿಲ್ ಸೂರ್ಯಕುಮಾರ್ ಯಾದವ್ ಜೊತೆ ಸೇರಿ ಅಬ್ಬರಿಸಿದರು. ಯಾದವ್ 13 ಎಸೆತದಲ್ಲಿ 24 ರನ್ ಸಿಡಿಸಿ ಔಟಾದರು.

ಗಿಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆಕರ್ಷಕ ಸೆಂಚುರಿ ಸಿಡಿಸಿದರು. ಈ ಮೂಲಕ ಶುಬಮನ್ ಗಿಲ್ ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರಿಕೊಂಡರು.

ಸೆಂಚುರಿ ಬಳಿಕ ಗಿಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮಂದಾದರು. ಈ ವೇಳೆ ಗಿಲ್ ಕ್ಯಾಚ್ ಕೈಚೆಲ್ಲಿದ ನ್ಯೂಜಿಲೆಂಡ್ ಮತ್ತಷ್ಟು ಆತಂಕ ಎದುರಿಸಿತು. ಬೌಂಡರಿ ಸಿಕ್ಸರ್ ಅಬ್ಬರ ಹಚ್ಚಾಯಿತು. ಹಾರ್ದಿಕ್ ಪಾಂಡ್ಯ 17 ಎಸೆತದಲ್ಲಿ 30 ರನ್ ಸಿಡಿಸಿ ಔಟಾದರು. ಶಭಮನ್ ಗಿಲ್ 63 ಎಸೆತದಲ್ಲಿ ಅಜೇಯ 126 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 234 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!