ಇದಂತೂ ಖಂಡಿತಾ ನಿಮ್ಮ ಮನೆಯಲ್ಲಿರಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೌದು ಈ ಪುಟ್ಟ ವಸ್ತುವಂತೂ ಖಂಡಿತಾ ನಿಮ್ಮೆಲ್ಲರ ಮನೆಯಲ್ಲಿರಲೇ ಬೇಕು. ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬಂತೆ ಇದರ ಪರಾಕ್ರಮ ಮಾತ್ರ ಅದ್ಭುತ. ಆಹಾರ, ಆರೋಗ್ಯ ಎರಡೂ ವಿಚಾರದಲ್ಲಿ ಇದಕ್ಕೆ ಪ್ರಮುಖ ಪ್ರಾಧಾನ್ಯತೆಯಿದೆ! ಆಯುರ್ವೇದದಲ್ಲೂ ಮಹತ್ತರ ಪಾತ್ರವಹಿಸಿದೆ. ಆಹಾರದಲ್ಲೂ ರುಚಿಯನ್ನು ಇಮ್ಮಡಿಗೊಳಿಸಲು, ಉತ್ತಮ ಪರಿಮಳ ನೀಡಲು ಇದರ ಬಳಕೆ ಮಾಡಲಾಗುತ್ತದೆ!
ಹೌದು ‘ಶುಂಠಿ’ ಎಂಬ ಎರಡಕ್ಷರದ ಈ ಗಡ್ಡೆ ಬಹೂಪಯೋಗಿ. ಬಿಸಿ ಬಿಸಿ ಚಹಾದೊಂದಿಗೆ ಬಳಸುವ ಮಂದಿಯೂ ಇದ್ದಾರೆ. ಹಲವು ಭಕ್ಷ್ಯಗಳಲ್ಲೂ ಶುಂಠಿ ಬಳಕೆಯಾಗುತ್ತದೆ. ಜೀರ್ಣಕ್ರಿಯೆ ಉತ್ತಮಗೊಳಿಸಲು ಇದು ಸಹಕಾರಿ. ನೆಗಡಿ, ಕೆಮ್ಮು, ಕಫ ಸಮಸ್ಯೆಗೆ ಇದು ರಾಮಬಾಣ. ಶುಂಠಿಯನ್ನು ಶಾಸ್ತ್ರೋಕ್ತ ರೀತಿಯಲ್ಲಿ ಒಣಗಿಸಿಯೂ ಬಳಸಲಾಗುತ್ತದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಇದರ ಬಳಕೆ ಹೆಚ್ಚಾಗಿದೆ.

ಇಂದು ಹೊರಗಿನ ಆಹಾರ ಸೇವೆನೆ ಮಾಡಿದಾಕ್ಷಣ ಅಸಿಡಿಟಿ, ಗ್ಯಾಸ್ ಸಮಸ್ಯೆ ತಲೆದೋರುತ್ತದೆ. ಹೊಟ್ಟೆಯುಬ್ಬರ ಕಂಡು ಬರುವುದು ಸಹಜ. ಒಣಶುಂಠಿಯ ಜೊತೆಗೆ ನೀರು ಸೇವಿಸುವುದರಿಂದ ಇದರ ನಿವಾರಣೆಯಾಗುತ್ತದೆ. ಕೆಮ್ಮು ಜೋರಾಗಿದ್ದರೆ ಸಣ್ಣ ತುಂಡು ಶುಂಠಿಯ ಜೊತೆಗೆ ಕಲ್ಲುಪ್ಪು ಸೇರಿಸಿ ಬಾಯಲ್ಲಿಟ್ಟು ರಸ ಸೇವಿಸುವುದರಿಂದ ಕಡಿಮೆಯಾಗುತ್ತದೆ. ಜೇನು ತುಪ್ಪದೊಂದಿಗೆ ಶುಂಠಿ ಅರೆದು ಸೇವಿಸುವುದರಿಂದ ಕಫ ನಿಯಂತ್ರಣವಾಗುತ್ತದೆ. ಒಣ ಶುಂಠಿ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಒಣಶುಂಠಿಯ ನೀರು ಸೇವನೆಯಿಂದ ಜೀರ್ಣ ಕ್ರಿಯೆ ಉತ್ತಮವಾಗಿ ಮಲಬದ್ಧತೆ ನಿವಾರಣೆಯಾಗುವುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಒಣಶುಂಠಿ ಸಹಕಾರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!