ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಂಠಿಪಾನಕ ಅತ್ಯಂತ ಉತ್ತಮ ಪೇಯ. ಬಿರು ಬೇಸಗೆಯಲ್ಲಿ ಶುಂಠಿ ಪಾನಕ ಸೇವನೆ ಮಾಡಿದರೆ ಉತ್ತಮ.
ಬೇಕಾಗುವ ಸಾಮಾಗ್ರಿಗಳು:
ಲಿಂಬೆ ಹಣ್ಣು 4, ಕಾಳುಮೆಣಸಿನ ಪುಡಿ ಕಾಲು ಟೀ ಸ್ಪೂನ್, ಒಂದು ಸಣ್ಣಗಾತ್ರದ ಶುಂಠಿ ತುಂಡು, ನೀರು 4ಕಪ್, ಬೆಲ್ಲ (ಜೋನಿ ಬೆಲ್ಲವಾದರೆ ಉತ್ತಮ)
ಶುಂಠಿಯನ್ನು ಜಜ್ಜಿ ರಸ ತೆಗೆದಿರಿಸಿಕೊಳ್ಳಿ. ನಿಂಬೇ ಹಣ್ಣನ್ನು ತುಂಡರಿಸಿ ರಸ ಸೋಸಿಟ್ಟುಕೊಳ್ಳಿ. ನೀರಿನೊಂದಿಗೆ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಶುಂಠಿ ರಸ ಮತ್ತು ಲಿಂಬೇರಸವನ್ನು ಬೆರೆಸಿಕೊಳ್ಳಿ. ಕಾಳುಮೆಣಸಿನ ಪುಡಿಯನ್ನು ಸೇರಿಸಿ. ಐಸ್ ಕ್ಯೂಬ್ ಇದ್ದರೆ ಸೇರಿಸಿಕೊಂಡು ಕುಡಿಯಲು ಕೊಡಿ. ಉತ್ತಮ ರುಚಿಯ ಶುಂಠಿಪಾನಕ ಕುಡಿಯಲು ಸಿದ್ಧ