VIRAL VIDEO| ಡೇಂಜರಸ್ ಸಾಹಸ: ಕಿಟಕಿ ಮೂಲಕ ಚಲಿಸುತ್ತಿದ್ದ ಬಸ್‌ ಹತ್ತಿದ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹುಡುಗರು ಬಸ್ಸಿನಲ್ಲಿ ಹೋಗುವಾಗ ಮಾಡುವ ಸ್ಟಂಟ್‌ಗಳು ಅಷ್ಟಿಷ್ಟಲ್ಲ. ನೇತಾಡುವುದು, ಚಲಿಸುತ್ತಿರುವ ಬಸ್ಸಿಗೆ ಜಿಗಿಯುವುದು, ಫುಟ್ ಬೋರ್ಡ್ ಮೇಲೆ ನಿಲುವುದು ಹೀಗೆ ನಾನಾ ಸಾಹಸಗಳನ್ನು ಮಾಡುತ್ತಾರೆ. ಯುವಕರು ಹಾಗೆ ಮಾಡುವುದರಲ್ಲಿ ಆಶ್ಚರ್ಯವಿಲ್ಲ ಆದರೆ, ಹುಡುಗಿಯರು ಇಂತಹ ಸಾಹಸಗಳನ್ನು ಮಾಡುವುದನ್ನು ನೀವು ನೋಡಿದ್ದೀರಾ? ಹಾಗಾದರೆ ಈ ವಿಡಿಯೋ ನೋಡಿ.

ಹರಿಯಾಣದ ಹುಡುಗಿಯೊಬ್ಬಳು ಚಲಿಸುತ್ತಿದ್ದ ಬಸ್ಸಿಗೆ ಕಿಟಕಿಯ ಮೂಲಕ ಹತ್ತಿ ಎಲ್ಲರನ್ನು ಅಚ್ಚರಿಗೊಳಿಸಿದಳು. ಹುಡುಗರಿಂದಲೂ ಸಾಧ್ಯವಾಗದ ಸಾಧನೆಯನ್ನು ಹುಡುಗಿ ಮಾಡಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಹುಡುಗಿಯ ಧೈರ್ಯವನ್ನು ಕೊಂಡಾಡಿದರು. ಬಸ್‌ ಹತ್ತಲು ದಾರಿ ಇಲ್ಲದ ಕಾರಣ ಆಕೆ ಬಸ್‌ನ ಟೈರ್‌ ಹತ್ತಿ ಚಿಕ್ಕ ಕಿಟಕಿಯ ಮೂಲಕ ಬಸ್‌ ಒಳಗೆ ಹತ್ತಬೇಕಾಯಿತು. ಇನ್ನು ಕೆಲವರು ಈ ಕೆಲಸ ತುಂಬಾ ಅಪಾಯಕಾರಿ. ತಪ್ಪಿ ಕೆಳಗೆ ಬಿದ್ದರೆ ಪ್ರಾಣ ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು. ದಯವಿಟ್ಟು ಇಂತಹ ಮಾರಕ ಸಾಹಸಗಳನ್ನು ಮಾಡಬೇಡಿ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!