September 2, 2026
Wednesday, September 2, 2026
spot_img

ಮಲೇರಿಯಾ ನಿಯಂತ್ರಣಕ್ಕೆ ನೀಡಿದ್ದ ಮಾತ್ರೆ ಕುಡಿದು ಬಾಲಕಿ ಸಾ*ವು, 53 ಜನರು ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಲೇರಿಯಾ ನಿಯಂತ್ರಣಕ್ಕೆ ನೀಡಿದ್ದ ಮಾತ್ರೆಗಳನ್ನು ಸೇವಿಸಿದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಪೋಲಾವರಂ ಜಿಲ್ಲೆಯಲ್ಲಿ ನಡೆದಿದೆ.

ಎಟಪಕ ತಾಲೂಕಿನ ಗೊಲ್ಲಗುಪ್ಪ ಗ್ರಾಮಕ್ಕೆ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿದ್ದು, ಮಾತ್ರೆಗಳನ್ನು ನೀಡಿದ್ದಾರೆ. ಈ ಮಾತ್ರೆಗಳನ್ನು ತೆಗೆದುಕೊಂಡರೆ ಮಲೇರಿಯಾ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿ 71 ಜನರಿಗೆ ಕ್ಲೋರೋಕ್ವಿನ್‌ ಎನ್ನು ಮಾತ್ರೆಯನ್ನು ನೀಡಿದ್ದರು. ಇದನ್ನು ಸೇವಿಸಿದ ನಂತರ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.

ಆದ್ರೆ ಗ್ರಾಮದ ಬಾಲಕಿ ಮದಿವಿ ಜಮುನಾ ಮಾತ್ರೆ ಸೇವಿಸಿ ಮೃತಪಟ್ಟ ದುರ್ದೈವಿ. ಜಮುನಾ ಶಾಲೆಯಲ್ಲಿ ಮಾತ್ರೆ ಸೇವಿಸಿ ಎಲ್ಲ ಮಕ್ಕಳಂತೆ ಸಂಜೆ ಮನೆಗೆ ತೆರಳಿದ್ದಾಳೆ. ಮನೆಗೆ ಹೋದ ಕೆಲವೇ ಸಮಯದಲ್ಲಿ ವಿದ್ಯಾರ್ಥಿನಿಗೆ ವಾಂತಿಯಾಗಿದೆ. ತೀವ್ರ ನಿತ್ರಾಣಳಂತೆ ಕಾಣುತ್ತಿದ್ದ ಆಕೆಯನ್ನು ತಕ್ಷಣವೇ ಪೋಷಕರು ಲಕ್ಷ್ಮಿಪುರಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

ಬಾಲಕಿಯು ಮೂರು ಮಾತ್ರೆಗಳನ್ನು ಸೇವಿಸಿದ್ದಾಳೆ ಎಂದು ವರದಿಯಾಗಿದೆ. ನಂತರ, ಶಾಲಾ ಮಕ್ಕಳು ಮತ್ತು ಗ್ರಾಮದ ಅಂಗನವಾಡಿ ಕೇಂದ್ರಗಳ ಮಕ್ಕಳು ಸೇರಿದಂತೆ ಇತರೆ 53 ಜನರು ಅಸ್ವಸ್ಥರಾಗಿದ್ದಾರೆ. ಅವರೆಲ್ಲರನ್ನೂ ತೆಲಂಗಾಣದ ಭದ್ರಾಚಲಂನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಸ್ವಸ್ಥರಲ್ಲಿ 46 ಮಕ್ಕಳು ಮತ್ತು ಏಳು ಮಂದಿ ವಯಸ್ಕರು ಇದ್ದು ಮತ್ತು ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅಸ್ವಸ್ಥರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಂತೆ ಆದೇಶಿಸಿದರು ಮತ್ತು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಿರ್ದೇಶನ ಸಿಎಂ ಚಂದ್ರಬಾಬು ಸೂಚನೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !