ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಣ್ಣು ಮಕ್ಕಳ ರಕ್ಷಣೆಗೆ ಎಷ್ಟೇ ಕಾನೂನು ಮಾಡಿದರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ನಡೆಯುವ ಅನಾಹುತಗಳು ನಡೆದುಹೋಗುತ್ತಿವೆ. ಮಹಿಳೆಯರು ಯಾವುದೇ ಕ್ಷಣದಲ್ಲಿ ಆತ್ಮಸ್ಥೈರ್ಯದಿಂದ ಯಾವುದೇ ಸಮಸ್ಯೆಯನ್ನು ಎದುರಿಸಲು ಸಿದ್ಧರಾಗಿರಬೇಕು. ಹೇಗಿರಬೇಕೆಂದರೆ. ಈ ಲೇಡಿ ಬ್ರೂಸ್ಲಿ ಅನುಚಿತವಾಗಿ ವರ್ತಿಸಿದ ಯುವಕರ ಕೈಕಾಲು ಮುರಿದಂತೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೆಸ್ಟೋರೆಂಟ್‌ನಲ್ಲಿ ಇಬ್ಬರು ಯುವಕರು ಕುಳಿತಿದ್ದು, ಇವರಿಬ್ಬರಿಗೆ ಆಹಾರ ಸರ್ವ್ ಮಾಡಲು ಬಂದ ಮಹಿಳಾ ವೇಟರ್‌ನೊಂದಿಗೆ ಯುವಕನೊಬ್ಬ ಅನುಚಿತವಾಗಿ ವರ್ತಿಸಲು ಹೊರಟಿದ್ದ. ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದರು. ತಕ್ಷಣವೇ ಆಕೆ ತನ್ನಲ್ಲಿರುವ ಶಕ್ತಿ ಎಷ್ಟೆಂದು ಇಬ್ಬರಿಗೂ ತೋರಿಸಿದ್ದಾಳೆ. ತನ್ನನ್ನು ತಾನು ಉಳಿಸಿಕೊಳ್ಳಲು ಆಕೆ ಕೆಚ್ಚೆದೆಯಿಂದ ಹೋರಾಡಿದ ರೀತಿ ಸ್ಪೂರ್ತಿದಾಯಕವಾಗಿದೆ.
ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೊವನ್ನು ನೋಡಿದ ನಂತರ ಜನರು ಹುಡುಗಿಯ ಧೈರ್ಯವನ್ನು ಮೆಚ್ಚಿದರು ಮತ್ತು ಅವಳನ್ನು ಲೇಡಿ ಬ್ರೂಸ್ಲಿ ಎಂದು ಬಣ್ಣಿಸಿದರು. ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಈ ವೀಡಿಯೊ ಅನೇಕ ಹುಡುಗಿಯರನ್ನು ಪ್ರೇರೇಪಿಸುತ್ತದೆ.
— caption this. (@harikarotalar) March 29, 2023