ದಿನಕ್ಕೆ ನೂರು ಬಾರಿ ಕರೆ ಮಾಡುವಂತೆ ಟಾರ್ಚರ್‌ ಕೊಟ್ಟ ಗರ್ಲ್‌ಫ್ರೆಂಡ್‌, ಅಸಲಿಗೆ ಸಮಸ್ಯೆಯೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಯ್‌ಫ್ರೆಂಡ್‌ ಜೊತೆ ಫೋನ್‌ನಲ್ಲಿ ಮಾತನಾಡೋದು ಖುಷಿ ವಿಷ್ಯಾನೇ ಆದ್ರೆ ಅತಿ ಆದ್ರೆ ಎಲ್ಲವೂ ವಿಷ!  ಹೌದು, ಚೀನಾದಲ್ಲಿ ಕ್ಸಿಯಾಯು ಎಂಬ (18) ವರ್ಷದ ಯುವತಿ ತನ್ನ ಬಾಯ್‌ಫ್ರೆಂಡ್‌ಗೆ ಪ್ರತಿ ದಿನ 100ಕ್ಕೂ ಹೆಚ್ಚು ಬಾರಿ ಫೋನ್​ನಲ್ಲಿ ಮಾತಾಡುತ್ತಿದ್ದಳು. ಮಾತನಾಡಿ ಮಾತನಾಡಿ ಬೇಸತ್ತ ಬಾಯ್‌ಫ್ರೆಂಡ್‌ ಬ್ರೇಕಪ್‌ ಮಾಡಿಕೊಂಡಿದ್ದಾನೆ.

ಆಕೆ ಸುಮ್ಮಸುಮ್ಮನೆ ಕರೆ ಮಾಡಿಲ್ಲ. ಅವಳು ಲವ್‌ ಬ್ರೇನ್‌ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸದ್ಯ ಯುವತಿಗೆ ಬೇಕಾದ ಅಗತ್ಯವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಕ್ಸಿಯಾಯು ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ನಿವಾಸಿ. ಈಕೆಯು ತನ್ನ ಗೆಳೆಯನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಬಳಿಕ  ಆತನ ನಂಬಿಕೊಂಡಿದ್ದಳು. ಆಕೆಗೆ ತನಗೆ ತಾನೇ ಯಾವಾಗಲೂ ಬಾಯ್‌ಫ್ರೆಂಡ್‌ ನನ್ನ ಜೊತೆಯೇ ಇರಬೇಕು ಅಂತಾ ಅಂದುಕೊಂಡಿದ್ದಳು. ಎಷ್ಟರ ಮಟ್ಟಿಗೆ ಅಂದ್ರೆ ಆತ ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ ಅನ್ನೋದನ್ನು ತನಗೆ ತಿಳಿಸಬೇಕು ಎಂದು ಆಕೆ ಬಯಸುತ್ತಿದ್ದಳು.

ಹಗಲು, ರಾತ್ರಿ ಎನ್ನದೇ ಪ್ರತಿ ಕ್ಷಣ ಆಕೆ ಮೆಸೇಜ್‌ ಕಳುಹಿಸಿದ್ದರೆ ಕೂಡಲೇ ಬಾಯ್‌ಫ್ರೆಂಡ್‌ ರಿಪ್ಲೈ ನೀಡಲೇಬೇಕಿತ್ತು. ಇಲ್ಲವಾದರೆ ದೊಡ್ಡ ಜಗಳವೇ ಆಗುತ್ತಿತ್ತು. ಬರುಬರುತ್ತಾ ಯುವತಿಯ ವರ್ತನೆಯಿಂದ ಬಾಯ್‌ಫ್ರೆಂಡ್‌ಗೆ ನೆಮ್ಮದಿಯೇ ನೆಮ್ಮದಿ ಇಲ್ಲದಂತೆ ಆಗಿತ್ತು, ಮೆಸೇಜ್‌ ಜೊತೆಗೆ ದಿನಕ್ಕೆ 100ಕ್ಕೂ ಹೆಚ್ಚು ಬಾರಿ ಫೋನ್​ನಲ್ಲಿ ಮಾತಾಡುವಂತೆ ಒತ್ತಾಯಿಸುತ್ತಿದ್ದಳು. ಬರೀ ಕಾಲ್‌ ಅಷ್ಟೇ ಅಲ್ಲ, ವಿಡಿಯೋ ಕಾಲ್‌ ಮಾಡೋದಕ್ಕೆ ಹಿಂಸೆ ನೀಡುತ್ತಿದ್ದಳು.

ಆಕೆಯ ಹಿಂಸೆ ತಾಳಲಾರದೆ ಬಾಯ್‌ಫ್ರೆಂಡ್‌ ಕರೆಗಳನ್ನು ಅವಾಯ್ಡ್‌ ಮಾಡಿದ್ದ. ಇದರಿಂದ  ಮನನೊಂದ ಯುವತಿ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕುತ್ತಿದ್ದಳಂತೆ. ಬಳಿಕ  ಇದನ್ನು ನೋಡಲಾರದೇ ಬಾಯ್‌ಫ್ರೆಂಡ್‌ ಪೊಲೀಸರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದಾದ ಬಳಿಕ ಈಕೆ ಲವ್‌ ಬ್ರೇನ್‌ ಕಾಯಿಲೆಗೆ ತುತ್ತಾಗಿದ್ದಾಳೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ. ಈ ಲವ್‌ ಬ್ರೇನ್‌ ಒಂದು ರೀತಿಯ ಮಾನಸಿಕ ಕಾಯಿಲೆಯಾಗಿದ್ದು, ಲವ್​​ ಬ್ರೇನ್​ಗೆ ತುತ್ತಾದವರು ಸುಖಾ ಸುಮ್ಮನೆ ಆತಂಕ ಪಡುತ್ತಿರುತ್ತಾರೆ. ಇಲ್ಲವಾದರೇ ಖಿನ್ನತೆಗೆ ಒಳಗಾಗುತ್ತಾರೆ ಎಂದು  ವೈದ್ಯರು ತಿಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!