ಹೆಣ್ಣುಮಕ್ಕಳು ಲೈಂಗಿಕ ಪ್ರಚೋದನೆಯನ್ನು ನಿಯಂತ್ರಿಸಬೇಕು: ಕೋಲ್ಕತ್ತಾ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹದಿಹರೆಯದ ಹುಡುಗಿಯರು ಲೈಂಗಿಕ ಪ್ರಚೋದನೆಯನ್ನು ನಿಯಂತ್ರಿಸಬೇಕು.ಅದೇ ರೀತಿ ಹುಡುಗರು ಸಹ ಸಣ್ಣ ವಯಸ್ಸಿನ ಹುಡುಗಿಯರನ್ನು ಗೌರವಿಸಬೇಕು ಎಂದು ಕೋಲ್ಕತ್ತಾ ಹೈಕೋರ್ಟ್ ತಿಳಿಸಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ ಯುವಕನನ್ನು ನ್ಯಾಯಾಲಯ ಖುಲಾಸೆಗೊಳಿಸಿದ ಸಂದರ್ಭದಲ್ಲಿ ಈ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಶ್ ಮತ್ತು ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ಪೀಠವು, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ವಿರುದ್ಧ ಹದಿಹರೆಯದವರ ಮನವಿಯನ್ನು ಆಲಿಸಿ, ​ ಎರಡು ನಿಮಿಷದ ಸಂತೋಷಕ್ಕೆ ಮಣಿದು ಇನ್ನೊಬ್ಬರ ಜೀವನದಲ್ಲಿ ಆಟವಾಡುವುದು ಸರಿಯಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಒಬ್ಬ ಯುವತಿ ಅಥವಾ ಮಹಿಳೆಯ ಕರ್ತವ್ಯಗಳನ್ನು ಗೌರವಿಸುವುದು ಹುಡುಗರ ಕರ್ತವ್ಯವಾಗಿದೆ. ಮಹಿಳೆಯನ್ನು ಗೌರವಿಸಲು ತನ್ನ ಮನಸ್ಸನ್ನು ಹುಡುಗರು ತರಬೇತಿ ಮಾಡಬೇಕು. ಹೆಣ್ಣಿನ ಸ್ವಾಭಿಮಾನ, ಘನತೆ ಮತ್ತು ಖಾಸಗಿತನದ ಹಕ್ಕನ್ನು ಗೌರವಿಸಬೇಕು ಎಂದು ನ್ಯಾಯಾಲಯ ತಿಳಿಹೇಳಿದೆ.

ಏನಿದು ಪ್ರಕರಣ:

ಹದಿಹರೆಯದ ಯುವಕ ತನ್ನ ಅಪ್ರಾಪ್ತ ವಯಸ್ಸಿನ ಸಂಗಾತಿಯೊಂದಿಗೆ ಲೈಂಗಿಕತೆ ಹೊಂದಿದ್ದಕ್ಕಾಗಿ ಕಳೆದ ವರ್ಷ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪಕ್ಕಕ್ಕಿರಿಸಿ ಆಪರಾಧಿ ಬಾಲಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿತು.

ಆದ್ರೆ ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಸ್ ಮತ್ತು ಪಾರ್ಥ ಸಾರಥಿ ಸೇನ್ ಅವರ ದ್ವಿಸದಸ್ಯ ಪೀಠವು ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿತು. ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಸಂಬಂಧಗಳಿಂದ ಉಂಟಾಗುವ ಕಾನೂನು ತೊಡಕುಗಳನ್ನು ತಪ್ಪಿಸಲು ಶಾಲೆಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣಕ್ಕೆ ಕರೆ ನೀಡಿತು.

ವಿಚಾರಣೆ ವೇಳೆ ಬಾಲಕಿ ತನ್ನ ಸ್ವಂತ ಇಚ್ಛೆಯಂತೆ ಸಂಬಂಧ ಹೊಂದಿದ್ದು, ಬಳಿಕ ಆತನನ್ನು ಮದುವೆಯಾಗಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದಳು. ಆದರೆ ಭಾರತದಲ್ಲಿ ಲೈಂಗಿಕತೆಗೆ ಒಪ್ಪಿಗೆಯ ವಯಸ್ಸು 18 ಆಗಿದೆ ಮತ್ತು ಇವರ ಸಂಬಂಧವು ಅಪರಾಧವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು.

ಹದಿಹರೆಯದವರಲ್ಲಿ ಲೈಂಗಿಕತೆಯು ಸಾಮಾನ್ಯವಾಗಿದೆ ಆದರೆ ಅಂತಹ ಪ್ರಚೋದನೆಯ ವ್ಯಕ್ತಿಯ ಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ, ಇದಕ್ಕೆ ಬಹುಶಃ ಪುರುಷ ಅಥವಾ ಮಹಿಳೆ ಹೊರತಾಗಿಲ್ಲ ಎಂದು ಪೀಠ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!