Wednesday, November 29, 2023

Latest Posts

ದೇಶದಲ್ಲಿ ಅಕ್ರಮ ವಾಸ: ಮುಂಬೈಯಲ್ಲಿ 17 ಬಾಂಗ್ಲಾ ಪ್ರಜೆಗಳ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಮತ್ತು ನಕಲಿ ದಾಖಲೆ ಬಳಸಿ ಸರ್ಕಾರಿ ಗುರುತಿನ ಚೀಟಿಗಳನ್ನು ಪಡೆಯಲು ಯತ್ನಿಸುತ್ತಿದ್ದ ಆರೋಪದಡಿ ಬಾಂಗ್ಲಾದೇಶದ 17 ಪ್ರಜೆಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬಾಂಗ್ಲಾ ಅಕ್ರಮ ವಲಸಿಗರ ಕುರಿತು ಸುಮನ್ ಮೊಮಿನ್ ಸರ್ದಾರ್(31), ಓಮರ್ ಫಾರೂಕ್ ಮೊಲ್ಲಾ (27)ಮತ್ತು ಸಲ್ಮಾನ್ ಅಯೂಬ್ ಖಾನ್ (34) ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ನಕಲಿ ದಾಖಲೆ ಬಳಸಿ ಸರ್ಕಾರಿ ಗುರುತಿನ ಚೀಟಿ ಪಡೆಯಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಓಮರ್ ಮತ್ತು ಸಲ್ಮಾನ್ ಬಾಂಗ್ಲಾದ ಏಜೆಂಟರ್‌ಗಳಾಗಿದ್ದು, ಅಲ್ಲಿಂದ ಜನರನ್ನು ಅಕ್ರಮವಾಗಿ ಭಾರತಕ್ಕೆ ಕರೆತಂದಿರುವುದು ತನಿಖೆಯಿಂದ ದೃಢಪಟ್ಟಿದೆ. ವಿರಾರ್ ಪ್ರದೇಶದಲ್ಲಿ ಬಾಂಗ್ಲಾದೇಶದ 10 ಪ್ರಜೆಗಳು ವಾಸಿಸುತ್ತಿದ್ದಾರೆ. ಉಳಿದ ನಾಲ್ವರು ಪಾಲ್ಘರ್ ಜಿಲ್ಲೆಯ ನಲ್ಲಾ ಸೊಪಾರಾದಲ್ಲಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಬಂಧಿತ ಬಾಂಗ್ಲಾದೇಶದ 17 ಅಕ್ರಮ ವಲಸಿಗರನ್ನು ಅಕ್ಟೋಬರ್ 25ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!