ಎಷ್ಟೇ ಪ್ರೀತಿಯಿದ್ದರೂ ಜೀವನದ ಯಾವುದೋ ಒಂದು ಸಮಯದಲ್ಲಿ ಯಾವುದೂ ಬೇಡ, ಏನೂ ಬೇಡ ಎನ್ನುವ ಸಂದರ್ಭ ಬರಬಹುದು. ನಿಮ್ಮವರನ್ನು ಬದಲಾಯಿಸುತ್ತಾ, ಈ ಸಂಬಂಧಕ್ಕೆ ಅರ್ಥವೇ ಇಲ್ಲ ಎನಿಸಬಹುದು. ದೂರ ಹೋದರೆ ಹಾಯಾಗಿರಬಹುದಾ ಎನ್ನುವ ಆಲೋಚನೆಯೂ ಬರಬಹುದು. ಆದರೆ ನಿಜಕ್ಕೂ ಅವರಿಲ್ಲದೆ ನೀವು ಬದುಕುತ್ತೀರಾ? ಉತ್ತಮ ಜೀವನ ನಡೆಸುತ್ತೀರಾ? ಸಂಬಂಧ ಮುರಿದುಹೋಗುತ್ತಿದೆ, ಹಗ್ಗದ ಕೊನೆಯ ದಾರದಲ್ಲಿ ಸಂಬಂಧ ಜೋತಾಡುತ್ತಿದೆ. ಇನ್ನೊಂದು ಚಾನ್ಸ್ ಕೊಡೋಣ ಎನಿಸಿದರೆ ಹೀಗೆ ಮಾಡಿ..
- ಅವರಿವರ ಮೇಲೆ ತಪ್ಪು ಹಾಕೋದನ್ನು ನಿಲ್ಲಿಸಿ. ನಿಮ್ಮ ತಪ್ಪಿಗೆ ನೀವೇ ಜವಾಬ್ದಾರಿ ತೆಗೆದುಕೊಳ್ಳಿ. ಹೌದು ತಪ್ಪು ಮಾಡಿದ್ದೇನೆ, ಇನ್ನು ತಪ್ಪಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ.
- ನಿಮ್ಮ ನಂಬಿಕೆಯನ್ನು ಅವರು ಮರಳಿ ಪಡೆಯಲು ಅವಕಾಶ ಕೊಡಿ. ಅವರನ್ನು ಇನ್ನೊಮ್ಮೆ ನಂಬಿ ನೋಡಿ
- ಸಂಪೂರ್ಣ ಪಾರದರ್ಶಕತೆ ಇರಲಿ. ಎಲ್ಲವನ್ನೂ ಹೇಳಿ, ಎಲ್ಲವನ್ನೂ ತೆರೆದಿಡಿ. ಬದಲಾವಣೆ ನಿಮಗೆ ಕಾಣುತ್ತದೆ.
- ಏನು ಮಾಡಿದರೂ ಆಗುತ್ತಿಲ್ಲ ಎನಿಸಿದರೆ ವೈದ್ಯರ, ಥೆರಪಿಸ್ಟ್‌ಗಳ ಸಲಹೆ ಪಡೆಯಿರಿ. ಇದು ಖಂಡಿತಾ ತಪ್ಪಲ್ಲ.
- ಅವರು ದುಃಖದಲ್ಲಿದ್ದರೆ, ಅಥವಾ ಅವರನ್ನು ದುಃಖದ ಕೂಪಕ್ಕೆ ನೀವು ತಳ್ಳಿದ್ದರೆ ಅಲ್ಲಿಂದ ಮೇಲೆತ್ತಲು ನೀವೇ ಸಹಾಯ ಮಾಡಬೇಕು.
- ಅವರ ನಿರೀಕ್ಷೆ ಏನು? ನಿಮ್ಮ ನಿರೀಕ್ಷೆ ಏನು? ಮಾತನಾಡಿ. ಅಲ್ಲಿಗೆ ಬರಲು ಸಾಧ್ಯವಾ? ಚರ್ಚಿಸಿ..
- ಆಗಾಗ ಹೊರಗೆ ಹೋಗಿಬನ್ನಿ. ಸಂಬಂಧದಲ್ಲಿ ತಾಜಾತನ ಇರುವುದು ಯಾವಾಗಲೂ ಮುಖ್ಯ.
- ನಿಮ್ಮ ಜಗತ್ತು ನಿಮ್ಮ ಸಂಗಾತಿಯಾಗಿರಲಿ. ಆದರೆ ನಿಮ್ಮ ಜಗತ್ತು ನಿಮ್ಮ ಸಂಗಾತಿಯಷ್ಟೇ ಆಗದಿರಲಿ. ಅರ್ಥವಾಗಲಿಲ್ಲವಾ? ಮತ್ತೊಮ್ಮೆ ಓದಿ..
- ಸಂಬಂಧ ಅಂದಮೇಲೆ ಎರಡೂ ಕಡೆ ಹೊಂದಾಣಿಕೆ ಮುಖ್ಯ. ಹೊಂದಿಕೊಳ್ಳಬಹುದಾದ್ದಕ್ಕೆ ಹಾಯಾಗಿ ಹೊಂದುಕೊಳ್ಳಿ. ಅದನ್ನು ಕೆಲಸ ಎಂದು ಪರಿಗಣಿಸಬೇಡಿ.