ಬಾಳಾ ಠಾಕ್ರೆಗೆ ಭಾರತ ರತ್ನ ನೀಡಿ: ಕೇಂದ್ರಕ್ಕೆ ಸಂಜಯ್ ರಾವತ್ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರಿಗೆ ಭಾರತ ರತ್ನ ನೀಡಬೇಕು ಎಂದು ಶಿವಸೇನೆ(ಯುಬಿಟಿ) ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ದಿ. ಬಾಳಾ ಠಾಕ್ರೆ ಅವರ 99ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್, ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅರ್ಹರಲ್ಲದ ಕೆಲವು ವ್ಯಕ್ತಿಗಳಿಗೆ ದೇಶದ ಅತ್ಯುನ್ನತ ನಾಗರಿಕ ಗೌರವನ್ನು ನೀಡಿದೆ. ಆದರೆ ದೇಶದಲ್ಲಿ ನಿಜವಾಗಿಯೂ ಹಿಂದುತ್ವದ ಬೀಜ ಬಿತ್ತಿದ ವ್ಯಕ್ತಿಗೆ ಭಾರತ ರತ್ನವನ್ನೂ ನೀಡಬೇಕು. ಶಿವಸೇನೆ ಸಂಸ್ಥಾಪಕರಿಗೆ ಭಾರತ ರತ್ನ ಏಕೆ ನೀಡಿಲ್ಲ? ‘ಹಿಂದೂ ಹೃದಯ ಸಾಮ್ರಾಟ್’ ಬಾಳಾ ಠಾಕ್ರೆ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು. ಇದು ಶಿವಸೇನೆ(ಯುಬಿಟಿ)ಯ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.

ಠಾಕ್ರೆ ಅವರ ಜನ್ಮ ಶತಮಾನೋತ್ಸವಕ್ಕೆ ಒಂದು ವರ್ಷ ಬಾಕಿ ಇದೆ. ಶತಮಾನೋತ್ಸವ ಆರಂಭವಾಗುವ ಮೊದಲು, ಅವರಿಗೆ ಭಾರತ ರತ್ನ ನೀಡುವುದು ಅವಶ್ಯಕ. ನೀವು ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕಿಲ್ಲ. ಆದರೆ ಬಾಳಾ-ಸಾಹೇಬ್ ಅವರಿಗೆ ಭಾರತ ರತ್ನ ನೀಡಿದರೆ, ಅದು ವೀರ್ ಸಾವರ್ಕರ್ ಅವರಿಗೆ ನೀಡಿದ ಗೌರವವಾಗುತ್ತದೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!