MUST READ | ಬೆಳಗಿನ ಈ ಅಭ್ಯಾಸಗಳನ್ನು ಬಿಟ್ಟುಬಿಡಿ, ಕೆಲವೇ ದಿನಗಳಲ್ಲಿ ಬದಲಾವಣೆ ಕಾಣುತ್ತೀರಿ..

ನಮ್ಮ ದಿನ ಶುರುವಾಗೋದೆ ತಪ್ಪುಗಳಿಂದ, ಸಾಕಷ್ಟು ಸಣ್ಣ ಸಣ್ಣ ತಪ್ಪು ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಇವು ತಪ್ಪುಗಳು ಎಂದೇ ನಿಮಗೆ ತಿಳಿದಿರುವುದಿಲ್ಲ, ಯಾವ ತಪ್ಪುಗಳು? ಯಾವ ವಿಷಯ ಇಲ್ಲಿದೆ ಮಾಹಿತಿ..

ಲೇಟಾಗಿ ಏಳುವುದು!
ಹೌದು, ಲೇಟಾಗಿ ಏಳುವುದು ನೀವು ಮಾಡುವ ಮೊದಲನೇ ತಪ್ಪು. ಬೆಳಗ್ಗೆ ಲೇಟಾಗಿ ಏಳೋದ್ರಿಂದ ಅರ್ಧಕ್ಕರ್ಧ ಕೆಲಸ ನಿಧಾನ ಆಗಿಬಿಡುತ್ತದೆ. ಬೆಳಗ್ಗೆ ಎಲ್ಲರಿಗಿಂತ ಮುಂಚೆ ಎದ್ದರೆ ಯಾವ ಒತ್ತಡವೂ ಇಲ್ಲದೆ ನಿಮ್ಮ ಕೆಲಸ ನೀವು ಮುಗಿಸಬಹುದು. ನೆಮ್ಮದಿಯಾಗಿ ಕುಳಿತು ಬೆಳಗಿನ ಚಹಾ ಎಂಜಾಯ್ ಮಾಡಬಹುದು ಅಲ್ವಾ?

4 ways to wake up early in the morning and conquer the alarm clock -  Hindustan Timesಯೋಗ, ವಾಕ್, ಜಿಮ್!
ಬೆಳಗ್ಗೆ ಎದ್ದ ತಕ್ಷಣವೇ ಸ್ನಾನಕ್ಕೆ ಹೋಗೋದು, ನಂತರ ರೆಡಿಯಾಗೋದು, ದಾರಿಯಲ್ಲೆಲ್ಲೋ ತಿಂಡಿ ತಿನ್ನೋದು.. ಇದು ನಿಮ್ಮ ನಾರ್ಮಲ್ ರೊಟೀನ್ ಆಗಿರಬಹುದು, ಬೆಳಗ್ಗೆ ಎದ್ದ ನಂತರ ವಾಕ್, ಜಿಮ್, ಯೋಗ ಅಥವಾ ಮನೆಯಲ್ಲೇ ಯಾವುದಾದರೂ ವ್ಯಾಯಾಮ ಮಾಡಿ. ದೇಹವನ್ನು ಚುರುಕುಗೊಳಿಸಿ.

How do you develop a workout habit? New study answersತಿಂಡಿಗೆ ಟಾಟಾ ಬೈ ಬೈ
ಎದ್ದಿದ್ದೇ ಲೇಟಾಯ್ತು ಕೆಲಸ ಬೇರೆ ಇದೆ, ತಿಂಡಿ ತಿನ್ನೋಕೆ ಟೈಮ್ ಇಲ್ಲ ಹಾಲು ಕುಡೀಬೋದು, ಅಥವಾ ಒಂದು ಹಣ್ಣು ತಿಂತೀನಿ ಸಾಕು. ಇದು ನಿಮ್ಮ ಅಭ್ಯಾಸವಾಗಿದ್ದರೆ ಮೊದಲು ಇದನ್ನು ಬಿಟ್ಟುಬಿಡಿ. ಬೆಳಗಿನ ಉಪಹಾರ ತುಂಬಾನೇ ಮುಖ್ಯ.

The best Very Good Recipes of Karnataka and Breakfastಎದ್ದು ಗಂಟೆಯಾದ್ರೂ ಖಾಲಿ ಹೊಟ್ಟೆ!
ಬೆಳಗ್ಗೆ ಬೇಗನೇ ಎದ್ದು ವರ್ಕೌಟ್ ಮುಗಿಸಿ, ಮನೆ ಕೆಲಸ ಮಾಡಿ, ಮಕ್ಕಳಿಗೆ ಗಂಡನಿಗೆ ತಿಂಡಿ ಊಟ ಎರಡೂ ಮಾಡಿ ಬಾಕ್ಸ್‌ಗೆ ಹಾಕಿ ಸಣ್ಣ ಪುಟ್ಟ ಮನೆಕೆಲಸ ಮಾಡಿದ ನಂತರ ಅವರೆಲ್ಲ ಹೋಗುತ್ತಾರೆ, ಆಗ ಸಮಯ ನೋಡಿ ಎಷ್ಟೋ ತಿಂಡಿ ತಿನ್ನೋದು ಮಾಡುತ್ತೀರಿ, ಬೆಳಗ್ಗೆ ಎದ್ದ ಅರ್ಧ ಗಂಟೆಯೊಳಗೆ ಏನಾದರೂ ಒಂದು ತಿನ್ನಿ, ಇಲ್ಲವೇ ಶೀಘ್ರ ಮಧುಮೇಹಕ್ಕೆ ತುತ್ತಾಗುತ್ತೀರಿ.

How to host a successful morning tea | lifestyle and more | Nerada Tea  Lifestyle blogಮೊಬೈಲ್ ನೋಡೋದು
ಬೆಳಗ್ಗೆ ಎದ್ದ ನಂತರ ಬೆಡ್ ಮೇಲೆಯೇ ಇದ್ದು, ಮೊಬೈಲ್ ನೋಡೋದು! ಹೌದು, ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಕೂತಾಗ ಕೆಟ್ಟ ಸುದ್ದಿಯೊಂದು ಕಣ್ಣಿಗೆ ಬಿದ್ದು, ಮೂಡ್ ಹಾಳಾಗಬಹುದು, ಸಮಯ ಕೂಡ ವೇಸ್ಟ್ ಅಲ್ವಾ?

Woman using mobile phone while lying on bed stock photo

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!