ಪಿಝಾದಲ್ಲಿ ಗಾಜಿನ ಚೂರುಗಳು ಪತ್ತೆ, ಇನ್ಮೇಲೆ ಪಿಝಾ ತಿನ್ನೋದಿಲ್ಲ ಎಂದ ನೆಟ್ಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯ ಊಟದ ಜೊತೆ ಹೊರಗೆ ತಿನ್ನೋ ಆಸೆಯಿಂದ ವ್ಯಕ್ತಿಯೊಬ್ಬರು ಡೊಮಿನೋಸ್ ಪಿಝಾ ಆರ್ಡರ್ ಮಾಡಿದ್ದು, ಪಿಝಾದಲ್ಲಿ ಗ್ಲಾಸ್ ಚೂರುಗಳನ್ನು ಕಂಡು ಭಯಬಿದ್ದಿದ್ದಾರೆ.

ಮಹಾರಾಷ್ಟ್ರದ ಅರುಣ್ ಮನೆಗೆ ಪಿಝಾ ತರಿಸಿಕೊಂಡಿದ್ದಾರೆ. ಗಾಜಿನ ಚೂರುಗಳನ್ನು ನೋಡಿ ಶಾಕ್ ಆಗಿದ್ದಾರೆ. ಇಷ್ಟೊಂದು ಹಣ ನೀಡಿಯೂ ಈ ರೀತಿ ಆಗಿದ್ದಕ್ಕೆ ಅರುಣ್ ಕೋಪಗೊಂಡಿದ್ದು, ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದಾರೆ.

ಪಿಝಾ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮುಂಬೈ ಪೊಲೀಸ್‌ಗೂ ಟ್ಯಾಗ್ ಮಾಡಿದ್ದಾರೆ. ಕಸ್ಟಮರ್ ಕೇರ್‌ನಲ್ಲಿ ಸೂಕ್ತ ಉತ್ತರ ದೊರಕದೇ ಇದ್ದ ಕಾರಣ, ಕಾನೂನಿನ ಮೊರೆ ಹೋಗುವ ಅವಕಾಶವೂ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!