ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಞಾನವಾಪಿ ಪ್ರಕರಣ ಸಂಬಂಧ ಇಂದು ಜಿಲ್ಲಾ ನ್ಯಾಯಾಧೀಶರು ವರದಿಯನ್ನು ಸಾರ್ವಜನಿಕಗೊಳಿಸಬೇಕೇ ಅಥವಾ ಬೇಡವೇ ಎಂಬ ವಿಷಯದ ವಿಚಾರಣೆ ನಡೆಸಿದ್ದು ಈ ವಿಚಾರವಾಗಿ ತೀರ್ಪು ನಾಳೆ ಬರಲಿದೆ.
ಈ ಪ್ರಕರಣದಲ್ಲೂ ಎರಡೂ ಕಡೆಯ ವಾದ ಆಲಿಸಿದ ಬಳಿಕ ನಾಳೆ ತೀರ್ಪು ಪ್ರಕಟಿಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದಾರೆ.
ಈ ಮಧ್ಯೆ ಸಂಶೋಧನ ವರದಿಯನ್ನು ಸಾರ್ವಜನಿಕಗೊಳಿಸುವ ಸಂಬಂಧ ನಾಲ್ಕು ವಾರಗಳ ಕಾಲಾವಕಾಶವನ್ನು ನೀಡುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಎಎಸ್ಐ ಡಿಸೆಂಬರ್ 18ರಂದು ಜಿಲ್ಲಾ ನ್ಯಾಯಾಲಯಕ್ಕೆ ಮುಚ್ಚಿದ ಕವರ್ನಲ್ಲಿ ಸಮೀಕ್ಷೆಯ ವರದಿಯನ್ನು ಸಲ್ಲಿಸಿತ್ತು. ಬುಧವಾರದ ವಿಚಾರಣೆ ಆರಂಭಕ್ಕೂ ಮುನ್ನ ಎಎಸ್ಐ ಮುಂದಿನ 4 ವಾರಗಳ ಕಾಲ ಸೀಲ್ ಮಾಡಿದ ಸಮೀಕ್ಷೆ ವರದಿಯನ್ನು ತೆರೆಯದಂತೆ ಹಾಗೂ ಕಕ್ಷಿದಾರರಿಗೆ ನೀಡದಂತೆ ಕೋರಿ ಅರ್ಜಿ ಸಲ್ಲಿಸಿದ್ದರು.