ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾನವ್ಯಾಪಿ ಮಸೀದಿಯಲ್ಲಿರುವ ಹಿಂದು ದೇವರ ಪೂಜೆಗೆ ಅವಕಾಶ ನೀಡಬೇಕು ಎಂದುಕೋರ್ಟ್ ಮೆಟ್ಟೇಲೇರಿದ್ದ ಐವರು ಮಹಿಳೆಯರಲ್ಲಿ ಒಬ್ಬರ ಪತಿಗೆ ಪಾಕಿಸ್ತಾನದ ದೂರವಾಣಿ ಸಂಖ್ಯೆಯಿಂದ ಬೆದರಿಕೆ ಕರೆಗಳು ಬಂದಿದೆ.ಅರ್ಜಿಯನ್ನು ಹಿಂಪಡೆಯುವಂತೆ ಕೋರಲಾಗಿದೆ ಎಂದು ಆರೋಪಿಸಲಾಗಿದೆ.
ಇಸ್ಲಾಮ್ ವಿರುದ್ಧ ನಡೆದುಕೊಂಡಿದ್ದೀರಿ. ನಿಮಗೆ ರುಂಡವನ್ನು ದೇಹದಿಂದ ಬೇರ್ಪಡಿಸುವ ಶಿಕ್ಷೆ ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ. ಇಷ್ಟೇ ಅಲ್ಲ ಪೂಜೆಗೆ ಅವಕಾಶ ನೀಡಿ ಎಂದು ಕೋರ್ಟ್‌ಗೆ ಸಲ್ಲಿಸಿರುವ ಮನವಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ತಿಂಗಳು ಈ ರೀತಿಯ ಬೆದರಿಕೆ ಕರೆ ಬಂದಿದೆ. ಇದೀಗ ಈ ಘಟನೆ ಬೆಳಕಿಗೆ ಬಂದಿದೆ.
ಗ್ಯಾನವ್ಯಾಪಿ ಮಸೀದಿ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ನೀಡಬೇಕು ಎಂದು ಲಕ್ಷ್ಮೀ ದೇವಿ ಸೇರಿದಂತೆ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಮನವಿಯ ಆಧಾರದಲ್ಲೇ ಸರ್ವೇ ಕಾರ್ಯವೂ ನಡೆದಿದೆ. ಇದೀಗ ಲಕ್ಷಿ ದೇವಿಯ ಪತಿ ಸೋಹನ್ ಲಾಲ್ ಆರ್ಯಾಗೆ ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ.
ಜುಲೈ 19 ಹಾಗೂ 20ಕ್ಕೆ ಅನಾಮಿಕ ಕರೆಯೊಂದು ಬಂದಿದೆ. ಫೋನ್ ರಿಸೀವ್ ಮಾಡಿದ ಬೆನ್ನಲ್ಲೇ ಸರ್ ತನ್ ಸೇ ಜುದಾ, ಸರ್ ತನ್ ಸೇ ಜುದಾ ಅನ್ನೋ ಘೋಷಣೆ ಮೊಳಗಿದೆ. ಬಳಿಕ ಗ್ಯಾನವ್ಯಾಪಿ ಮಸೀದಿ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಇಸ್ಲಾಮ್‌ನಲ್ಲಿನ ಸರ್ ತನ್ ಸೆ ಜುದಾ ಶಿಕ್ಷೆ ನೀಡಡಲಾಗುತ್ತದೆ ಎಂದಿದ್ದಾರೆ. ಸತತ 2 ದಿನ ಕರೆಗಳು ಬಂದಿದೆ ಎಂದು ಸೋಹನ್ ಲಾಲ್ ಆರ್ಯ ಹೇಳಿದ್ದಾರೆ.
ಆಗಸ್ಟ್ 2 ರಂದು ಇದೇ ನಂಬರ್‌ನಿಂದ ಮೂರು ಕರೆಗಳು ಬಂದಿದೆ. ಇದೀಗ ನಮ್ಮ ಕುಟುಂಬ ಜೀವ ಭಯದಲ್ಲಿದೆ. ನಮಗೆ ರಕ್ಷಣೆಯ ಅಗತ್ಯವಿದೆ ಎಂದು ಸೋಹನ್ ಲಾಲ್ ಆರ್ಯ ಹೇಳಿದ್ದಾರೆ.