ಇಂದೇ ಸಿನಿಮಾ ನೋಡೋಕೆ ಹೋಗಿ, ಟಿಕೆಟ್ ದರ 99 ರುಪೀಸ್ ಮಾತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿ ಪ್ರೇಮಿಗಳಿಗೆ ಇಂದು ವಿಶೇಷ ಆಫರ್ ನೀಡಲಾಗಿದ್ದು, ಪಿವಿಆರ್ ಹಾಗೂ ಐನಾಕ್ಸ್‌ಗಳಲ್ಲಿ 99 ರೂಪಾಯಿ ಟಿಕೆಟ್ ಪಡೆದು ಸಿನಿಮಾ ನೋಡಬಹುದಾಗಿದೆ.

ಪಿವಿಆರ್ ಸಿನಿಮಾಗಳಿಂದ ಲೇಟೆಸ್ಟ್ ಸಿನಿಮಾಗಳ ಮೇಲೆ ರಿಯಾಯಿತಿ ಇದೆ. ಸದ್ಯಕ್ಕೆ ಆಲ್ ಇಂಡಿಯಾ ಶ್ರೇಣಿ, ಆರ್ಟಿಕಲ್ 370, ಕ್ರ್ಯಾಕ್, ತೇರಿ ಬಾತೋಮೆ ಏಸಾ ಉಲ್ಜಾ ಜಿಯಾ ಹಾಗೂ ಫೈಟರ್‌ನಂಥ ಸಿನಿಮಾಗಳನ್ನು ನೋಡಬಹುದಾಗಿದೆ.

ಆದರೆ ಈ ಆಫರ್ ಕರ್ನಾಟಕದಲ್ಲಿ ಇಲ್ಲ. ನಾರ್ಥ್ ಇಂಡಿಯಾದ ಕೆಲ ರಾಜ್ಯಗಳಲ್ಲಿ ಈ ಆಫರ್ ನೀಡಲಾಗಿದೆ. ಕೆಲ ದಿನಗಳ ನಂತರ ಕರ್ನಾಟಕದಲ್ಲಿಯೂ ಆಫರ್ ಬರಲಿದೆ. ಇನ್ನು ರಿಕ್ಲೈನರ್ ಸೀಟ್‌ಗಳು ಬೇಕಾದಲ್ಲಿ 100 ರೂಪಾಯಿ ಹೆಚ್ಚುವರಿ ನೀಡಬೇಕಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!