ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಕ್ಕನ್ನು ರಕ್ಷಿಸಲು ಮುಂದಾದ ವ್ಯಕ್ತಿಯೋರ್ವರು ಬಾವಿಗೆ ಬಿದ್ದ ಘಟನೆ ಶನಿವಾರ ನಂದಳಿಕೆಯಲ್ಲಿ ಸಂಭವಿಸಿದೆ. ನಂದಳಿಕೆ ಗೋಳಿಕಟ್ಟೆ ಪಂಚಾಯತ್ ಬಳಿ ನಿವಾಸಿ ಭೋಜ ಎಂಬವರು ಬೆಳಿಗ್ಗೆ ತಮ್ಮ ಮನೆಯ ಬಾವಿಗೆ ಬಿದ್ದಿರುವ ಬೆಕ್ಕನ್ನು ರಕ್ಷಿಸಲು ಬಾವಿಯ ಹಗ್ಗದ ಸಹಾಯದಿಂದ ಬಾವಿಗೆ ಇಳಿದ ಸಂದರ್ಭ ಹಗ್ಗ ತುಂಡಾಗಿ ಕೆಳಗೆ ಬಿದ್ದಿದ್ದು, ಕೂಡಲೇ ಮನೆಯವರು ಸ್ಥಳೀಯರೊಂದಿಗೆ ಸೇರಿ ಅವರನ್ನು ಮೇಲೆಕ್ಕೆತ್ತುವ ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿಲ್ಲ.
ಬಳಿಕ ಅಗ್ನಿ ಶಾಮಕ ದಳದವರು ಬಾವಿಗೆ ಬಿದ್ದ ವ್ಯಕ್ತಿಯನ್ನು ಮೇಲೆಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿರುತ್ತಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ದಫೆದರ್ ರೂಪೇಶ್, ಸಿಬ್ಬಂದಿಗಳಾದ ಚಂದ್ರಶೇಖರ್, ಕೇಶವ್, ನಿತ್ಯಾನಂದ, ಸಂಜಯ್ ಪಾಲ್ಗೊಂಡಿದ್ದರು.