SHOCKING| ಅಜುರ್‌ ಏರ್ ವಿಮಾನದಲ್ಲಿ ಮತ್ತೆ ಬಾಂಬ್ ಬೆದರಿಕೆ: ಉಜ್ಬೇಕಿಸ್ತಾನಕ್ಕೆ ಡೈವರ್ಶನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿನದಿಂದ ದಿನಕ್ಕೆ ವಿಮಾನಗಳಲ್ಲಿ ಬಾಂಬ್‌ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಇದೀಗ ರಷ್ಯಾದಿಂದ ಗೋವಾಕ್ಕೆ ಹೊರಟಿದ್ದ ಚಾರ್ಟರ್ಡ್ ವಿಮಾನದಲ್ಲಿ ಬಾಂಬ್ ಇರುವುದಾಗಿ ಗೋವಾ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇ-ಮೇಲ್ ಮೂಲಕ ಬೆದರಿಕೆ ಬಂದಿತ್ತು. ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸುವ ಸ್ವಲ್ಪ ಸಮಯದ ಮೊದಲು ಬಾಂಬ್ ಬೆದರಿಕೆಯಿಂದ ಎಚ್ಚರಗೊಂಡ ವಾಯುಯಾನ ಅಧಿಕಾರಿಗಳು ವಿಮಾನವನ್ನು ಉಜ್ಬೇಕಿಸ್ತಾನ್ ವಿಮಾನ ನಿಲ್ದಾಣಕ್ಕೆ ತಿರುಗಿಸಿ ಸುರಕ್ಷಿತವಾಗಿ ಇಳಿಸಿದರು.

Azure Air ವಿಮಾನ (AZV2463) 240 ಪ್ರಯಾಣಿಕರೊಂದಿಗೆ ರಷ್ಯಾದಿಂದ ಹೊರಟಿತು. ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 4.15ಕ್ಕೆ ಇಳಿಯಬೇಕಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಡಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಮಧ್ಯ ರಾಥ್ರಿ 12.30 ರ ಸುಮಾರಿಗೆ ಇ-ಮೇಲ್ ಬಂದಿದ್ದು, ವಿಮಾನವನ್ನು ತಕ್ಷಣವೇ ಎಚ್ಚರಿಸಿ ಉಜ್ಬೇಕಿಸ್ತಾನ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.

ಒಂದು ವಾರದಲ್ಲಿ ಇದು ಎರಡನೇ ಬಾಂಬ್ ಬೆದರಿಕೆಯಾಗಿದೆ. ಇದೇ ತಿಂಗಳ 9ರಂದು ಬಾಂಬ್ ಬೆದರಿಕೆ ಘಟನೆ ನಡೆದಿತ್ತು. ಬಾಂಬ್ ಬೆದರಿಕೆ ಬಂದ ನಂತರ ಅಜುರ್ ಏರ್‌ನ ಮತ್ತೊಂದು ಚಾರ್ಟರ್ ವಿಮಾನವನ್ನು ಗುಜರಾತ್‌ನ ಜಾಮ್‌ನಗರಕ್ಕೆ ತಿರುಗಿಸಲಾಯಿತು. ಈ ವೇಳೆ ತುರ್ತು ಭೂಸ್ಪರ್ಶ ಮಾಡಿದ ವಿಮಾನದಲ್ಲಿ 236 ಪ್ರಯಾಣಿಕರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!