Saturday, March 25, 2023

Latest Posts

ದೇವರು ದೇವರೆ, ಕಲಾವಿದರು ಕಲಾವಿದರೆ, ಯಾವುದನ್ನೂ ಅತಿರೇಕ ಮಾಡ್ಬೇಡಿ, ‘ಪುನೀತ ಮಾಲೆ’ವಿರುದ್ಧ ಮಾತನಾಡಿದ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುನೀತ್ ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಅಪ್ಪು ಅಭಿಮಾನಿಗಳು ಪುನೀತ ಮಾಲೆ ಅಭಿಯಾನ ಆರಂಭಿಸಿದ್ದರು. ಇದಕ್ಕೆ ವಿಧಿ ವಿಧಾನಗಳನ್ನು ಅಭಿಮಾನಿಗಳು ಕಂಡುಕೊಂಡಿದ್ದು, ವ್ರತ ಆಚರಣೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಒಳ್ಳೆ ಹುಡ್ಗ ಪ್ರಥಮ್ ಮಾತನಾಡಿದ್ದಾರೆ.

bigg boss pratham, ನನ್ನ ಮುಸ್ಲಿಂ ಸ್ನೇಹಿತರ ಮಾತಿಗೆ ಬೆಲೆ ಕೊಟ್ಟು ಸುಮ್ಮನಿದ್ದೇನೆ, ಕೆರಳಿಸಬೇಡಿ: ಬಿಗ್ ಬಾಸ್ ಪ್ರಥಮ್! - nata bhayankara actor olle huduga pratham comments on bangaluru dj halli ...ದೇವರ ಮೇಲೆ ಭಕ್ತಿ ಇರಲಿ, ಕಲಾವಿದರ ಮೇಲೆ ಪ್ರೀತಿ ಇರಲಿ, ಶಬರಿಮಲೆಗೆ ಹೋಗೋದು ಅಯ್ಯಪ್ಪ ಸ್ವಾಮಿಗೆ ಶರಣಾಗೋಕೆ, ಇಲ್ಲಿ ಬಹಳಷ್ಟು ಶಿಸ್ತುಗಳನ್ನು ಪಾಲಿಸಿ ಶ್ರದ್ಧಾಭಕ್ತಿಯಿಂದ ಮಾಲೆ ಧಾರಣೆ ಮಾಡಲಾಗುತ್ತದೆ. ಕಲಾವಿದರನ್ನು ಕಲಾವಿದರಾಗೇ ಇರೋದಕ್ಕೆ ಬಿಡಿ, ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತಿರೇಕದದ ವರ್ತನೆ ತೋರಬಾರದು ಎಂದು ಪ್ರಥಮ್ ಹೇಳಿದ್ದಾರೆ.

ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಪ್ರಥಮ್ ಹೇಳ್ತಿರೋದು ಸರಿಯಾಗಿದೆ ಎಂದು ಸಾಕಷ್ಟು ಮಂದಿ ಹೇಳಿದ್ದು, ಪುನೀತ್ ಅಭಿಮಾನಿಗಳು ಮಾತ್ರ ಗರಂ ಆಗಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!