ಸತ್ಯಾಗ್ರಹಕ್ಕೂ ಸೈ.. ಸಶಸ್ತ್ರ ಹೋರಾಟಕ್ಕೂ ಸೈ.. ಇದು ಅನನ್ಯ ಹೋರಾಟಗಾರ್ತಿ ಗೋದಾವರಿ ಸಾಹಸಗಾಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಗೋದಾವರಿ ಪರುಲೇಕರ್ (1907- 1996) ಮಹಾರಾಷ್ಟ್ರದ ಮೊದಲ ಮಹಿಳಾ ಕಾನೂನು ಪದವೀಧರರಾಗಿದ್ದರು. ಬ್ರಿಟಿಷರ ಆಡಳಿತದ ವಿರುದ್ಧ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದರು.
ಗೋದಾವರಿಯವರ ಸ್ವಾತಂತ್ರ್ಯ ಸೇವೆ ಅನನ್ಯವಾದುದು. ಸ್ವಾತಂತ್ರ್ಯ ಹೋರಾಟದತ್ತ ಅದಮ್ಯ ಆಕರ್ಷಣೆ ಹೊಂದಿದ್ದ ಗೋದಾವರಿ ಅವರು ಸತ್ಯಾಗ್ರಹ ಚಳುವಳಿಗೆ ಧುಮುಕಿದರು. ಅದಕ್ಕಾಗಿ 1932 ರಲ್ಲಿ ಬ್ರಿಟಿಷ್ ಆಡಳಿತದಿಂದ ಆಕೆಗೆ ಜೈಲು ಶಿಕ್ಷೆ ವಿಧಿಸಿತು.
ಬಿಡುಗಡೆ ಬಳಿಕ ಗೋದಾವರಿ ಮುಂಬೈಗೆ ಬಂದು ನೆಲೆಸಿ ಸಮಾಜ ಸೇವೆಯನ್ನು ಕೈಗೊಂಡರು. 1905 ರಲ್ಲಿ ಗೋಪಾಲ ಕೃಷ್ಣ ಗೋಖಲೆಯವರಿಂದ ಸ್ಥಾಪಿತವಾದ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸೇರಿ ಬಡಜನರ ಪರವಾಗಿ ಸೇವಾಕಾರ್ಯಗಳನ್ನು ನಡೆಸಿದರು.
ಆಕೆ ಸೊಸೈಟಿಯ ಆಜೀವ ಸದಸ್ಯರಾಗಿ ಸೇರ್ಪಡೆಗೊಂಡ ಮೊದಲ ಮಹಿಳೆಯಾಗಿದ್ದರು. ಮಾರ್ಕ್ಸ್‌ವಾದಿ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಗೋದಾವರಿ ಪೋರ್ಚುಗೀಸ್ ಆಳ್ವಿಕೆಯಿಂದ ದಾದ್ರಾ ಮತ್ತು ನಗರ್ ಹವೇಲಿಯ ವಿಮೋಚನೆಗಾಗಿ ದೊಡ್ಡಮಟ್ಟದ ಹೋರಾಟಗಳನ್ನು ಆಯೋಜಿಸಿದರು. 1945 ರಲ್ಲಿ ವಾರ್ಲಿ ಆದಿವಾಸಿ ದಂಗೆಯ ಸಶಸ್ತ್ರ ಹೋರಾಟದಲ್ಲಿ ಮೂಚೂಣಿಯಲ್ಲಿ ಫಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!