ನವರಾತ್ರಿ ದಿನ 3: ಧೈರ್ಯ ಹಾಗೂ ಶಕ್ತಿಗೆ ಚಂದ್ರಘಟಾ ದೇವಿಯನ್ನು ಪ್ರಾರ್ಥಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ನವರಾತ್ರಿ ಮೂರನೇ ದಿನ, ಈ ದಿನ ತಾಯಿ ಚಂದ್ರಘಟಾಳಿಗೆ ಪ್ರಾರ್ಥನೆ ಮಾಡಲಾಗುತ್ತದೆ. ಚಂದ್ರಘಟಾ ಎಂದರೆ ಹೆಸರೇ ಸೂಚಿಸುವಂತೆ ಗಂಟೆಯ ಆಕಾರದಲ್ಲಿರುವ ಅರ್ಧಚಂದ್ರ ಎಂದರ್ಥ.

ದೇವಿ ಚಂದ್ರಘಟಾ ತನ್ನ ಭಕ್ತರ ಚಿಂತೆಗಳನ್ನು, ದೈಹಿಕ ಹಾಗೂ ಮಾನಸಿಕ ನೋವುಗಳನ್ನು ದೂರಮಾಡುತ್ತಾಳೆ ಎನ್ನುವ ನಂಬಿಕೆ ಇದೆ. ಇನ್ನು ಪಾಪಗಳನ್ನು ಮಾಡಿ, ಪಶ್ಚಾತ್ತಾಪ ಪಡುವವರನ್ನು ಕಾಪಾಡುತ್ತಾಳೆ ಎನ್ನಲಾಗಿದೆ.

ಹುಲಿ/ಸಿಂಹದ ಮೇಲೆ ಚಂದ್ರಘಟಾ ದೇವಿ ಕುಳಿತಿದ್ದು, ಈಕೆಗೆ ಹತ್ತು ಕೈಗಳಿವೆ. ಹತ್ತು ಕೈಗಳಲ್ಲಿ ಕಮಂಡಲ, ಕಮಲ, ಖಡ್ಗ, ಗಧೆ,ಬಾಣ, ಜಪಮಾಲೆ,ಅಭಯಮುದ್ರ, ಜ್ಞಾನಮುದ್ರಾ ಹಾಗೂ ತ್ರಿಶೂಲ ಹೀಗೆ ಹಲವಾರು ವಸ್ತುಗಳಿವೆ. ಒಂದು ಕೈ ಮಾತ್ರ ಆಶೀರ್ವಾದ ನೀಡುವ ಭಂಗಿಯಲ್ಲಿದೆ.

ಚಂದ್ರಘಟಾ ದೇವಿಯು ಹಣೆಯ ಮೇಲೆ ಮೂರನೇ ಕಣ್ಣನ್ನು ಹೊಂದಿದ್ದಾಳೆ, ಈ ಕಣ್ಣು ಆಕೆಯ ಶೌರ್ಯದ ಪ್ರತಿರೂಪವಾಗಿದೆ. ಶಾಂತದೇವಿಯು ಸಮಾಜದ ಒಳಿತಿಗಾಗಿ ಅಗತ್ಯ ಬಿದ್ದರೆ ತನ್ನ ಉಗ್ರರೂಪ ತೋರಿಸಲು ಹಿಂಜರಿಯುವುದಿಲ್ಲ. ಯುದ್ಧದ ಪರಿಸ್ಥಿತಿಗೆ ಆಕೆ ಸದಾ ಸನ್ನದ್ಧಳಾಗಿರುತ್ತಾಳೆ. ಹಲವು ರಾಕ್ಷಸರನ್ನು ಮಟ್ಟಹಾಕಿದ್ದಾಳೆ. ಧೈರ್ಯ ಹಾಗೂ ಶಕ್ತಿಗಾಗಿ ದೇವಿ ಚಂದ್ರಘಟಾಳನ್ನು ಪ್ರಾರ್ಥಿಸಬೇಕು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!