ನವರಾತ್ರಿ ದಿನ 4: ಮೃದು ನಗುವಿನಿಂದ ಜಗತ್ತನ್ನೇ ಸೃಷ್ಟಿಸಿದ ಕೂಷ್ಮಾಂಡ ದೇವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವರಾತ್ರಿಯ ನಾಲ್ಕನೇ ದಿನದಂದು ನವದುರ್ಗೆಯ ನಾಲ್ಕನೇ ರೂಪವಾದ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ.
ಕೂಷ್ಮಾಂಡ ದೇವಿಯು ತನ್ನ ದಿವ್ಯ ಶಕ್ತಿ ಹಾಗೂ ಮೃದುವಾದ ನಗುವಿನೊಂದಿಗೆ ಇಡೀ ಜಗತ್ತನ್ನೇ ಸೃಷ್ಟಿಸಿದಳು ಎನ್ನಲಾಗುತ್ತದೆ. ಈ ದೇವಿಯು ಎಂಟು ಕೈಗಳನ್ನು ಹೊಂದಿದ್ದಾಳೆ. ಹಾಗಾಗಿ ಈಕೆಯನ್ನು ಅಷ್ಟಭುಜ ದೇವಿ ಎಂದೂ ಕರೆಯಲಾಗುತ್ತದೆ. ಮಾ ಕೂಷ್ಮಂಡ ಸೂರ್ಯನನ್ನು ಆಳುತ್ತಾಳೆ. ಅನಾರೋಗ್ಯ ಕಾಡಿದಾಗ ಹಾಗೂ ರೋಗಗಳಿಂದ ಮುಕ್ತಿ ಹೊಂದಲು ಕುಷ್ಮಂಡಾ ದೇವಿಯನ್ನು ಪೂಜಿಸಲಾಗುತ್ತದೆ.

ಕೂಷ್ಮಾಂಡ ಎನ್ನುವ ಪದ ಸಂಸ್ಕೃತದ್ದು. ಇದರರ್ಥ ಒಂದು ರೀತಿಯ ಹಣ್ಣು ಎಂದು ಇದೇ ಕಾರಣಕ್ಕಾಗಿ ತಾಯಿಯನ್ನು ಮೆಚ್ಚಿಸಲು ಬೂದು ಕುಂಬಳಕಾಯಿಯನ್ನು ದಾನ ಮಾಡುತ್ತಾರೆ, ತಾಯಿಗೆ ಒಪ್ಪಿಸುತ್ತಾರೆ. ಈ ತಾಯಿ ಸಂಪತ್ತು ಹಾಗೂ ಸಂತೋಷವನ್ನು ಜನರ ಬಾಳಿನಲ್ಲಿ ತರುತ್ತಾಳೆ ಎನ್ನುವ ನಂಬಿಕೆ ಭಕ್ತರದ್ದು.

ತನ್ನ ಎಂಟು ತೋಳುಗಳಲ್ಲಿ ಈಕೆ ಜಪಮಾಲೆ, ಕಮಂಡಲ,ಚಕ್ರ, ಗಧೆ ಹಾಗೂ ಇನ್ನಿತರ ವಸ್ತುಗಳನ್ನು ಹಿಡಿದಿದ್ದಾಳೆ. ಈ ತಾಯಿಯ ನಗುವಿನಿಂದ ಇಡೀ ವಿಶ್ವವೇ ಹುಟ್ಟಿತು ಎನ್ನಲಾಗಿದೆ, ಸದಾ ಹಸನ್ಮುಖಿಯಾಗಿರುವ ಕೂಷ್ಮಾಂಡ ದೇವಿ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ದೇವಿ ಸೌರವ್ಯೂಹದ ಒಳಗಿನ ಪ್ರಪಂಚದಲ್ಲಿದೆ ಎಂದು ನಂಬಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!