Wednesday, February 1, 2023

Latest Posts

ಐಪಿಎಲ್‌ ಮಿನಿ ಹರಾಜಿಗೆ ದೇವರ ನಾಡು ಸಜ್ಜು: ಪ್ರಮುಖ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್‌ ಮಿನಿ ಹರಾಜಿಗೆ ದೇವರ ನಾಡು ಕೇರಳದ ಕೊಚ್ಚಿಯಲ್ಲಿ ಬಾರದ ಸಿದ್ಧತೆ ನಡೆಯುತ್ತಿದ್ದು,ಡಿ.23 ರಂದು ಮಿನಿ ಹರಾಜು ನಡೆಯಲಿದೆ.

ಈ ಹರಾಜಿಗೆ ಭಾರತದ 714 ಮಂದಿ ಸೇರಿ ಒಟ್ಟು 991 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಅಂತಿಮ ಪಟ್ಟಿಯಲ್ಲಿ ಬೆನ್‍ಸ್ಟೋಕ್ಸ್, ಸ್ಯಾಮ್ ಕರ್ರನ್, ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್‍ರಂತಹ ಸ್ಟಾರ್ ಆಟಗಾರರಿಗೆ 2 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ.

14 ದೇಶಗಳಿಂದ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾದಿಂದ ಒಟ್ಟು 57 ಆಟಗಾರರ ಹೆಸರು , ದಕ್ಷಿಣ ಆಫ್ರಿಕಾ 52, ವೆಸ್ಟ್ ಇಂಡೀಸ್ 33, ಇಂಗ್ಲೆಂಡ್ 31, ನ್ಯೂಜಿಲೆಂಡ್ 27, ಶ್ರೀಲಂಕಾ 23, ಅಫ್ಘಾನಿಸ್ತಾನ 14, ಐರ್ಲೆಂಡ್ 8, ನೆದರ್‌ಲ್ಯಾಂಡ್‌ 7, ಬಾಂಗ್ಲಾದೇಶ 6, ಯುಎಇ 6, ಜಿಂಬಾಬ್ವೆ 6, ನಮೀಬಿಯಾ 5 ಮತ್ತು ಸ್ಕಾಟ್ಲೆಂಡ್‍ನಿಂದ ಇಬ್ಬರು ಆಟಗಾರರು ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದೀಗ ಪ್ರತಿ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಹೊಂದಲು ಅವಕಾಶವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!