ವೀಕೆಂಡ್‌ನಲ್ಲಿ ಲಾಲ್‌ಬಾಗ್‌ ಹೋಗ್ತೀರಾ? ಟಿಕೆಟ್‌ ರೇಟ್‌ ಹೆಚ್ಚಾಗಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ಅಂದ್ರೆ ಬೆಂಗಳೂರಿಗರಿಗೆ ಅಚ್ಚುಮೆಚ್ಚು, ವೀಕೆಂಡ್‌ನಲ್ಲಿ ಬೆಂಗಳೂರಿಗರು ಇಲ್ಲೇ ಕಾಣಿಸ್ತಾರೆ, ಆದರೆ ಇದೀಗ ಇಲ್ಲಿನ ಎಂಟ್ರಿ ಫೀಸ್‌ ಹಾಗೂ ಪಾರ್ಕಿಂಗ್‌ ಫೀಸ್‌ ಹೆಚ್ಚಾಗಿದ್ದು, ಜನರ ಚಿಂತೆಗೆ ಕಾರಣವಾಗಿದೆ.

ಐದು ವರ್ಷಗಳಿಗೊಮ್ಮೆ ಲಾಲ್ ಬಾಗ್ ತೋಟಗಾರಿಕೆ ಇಲಾಖೆ ಪ್ರವೇಶ ಶುಲ್ಕವನ್ನು ಜಾಸ್ತಿ ಮಾಡುತ್ತದೆ. ಅದರಂತೆ 2018 ರಲ್ಲಿ ಲಾಲ್ ಬಾಗ್​​ನಲ್ಲಿ ಪ್ರವೇಶ ಶುಲ್ಕವನ್ನು 20 ರಿಂದ 30 ರೂ.ಗೆ ಜಾಸ್ತಿ ಮಾಡಲಾಗಿತ್ತು. ಇದೀಗ ಆರು ವರ್ಷದ ಬಳಿಕ ಎಂಟ್ರಿ ಫೀ, ಪಾರ್ಕಿಂಗ್ ಫೀ, ಮಕ್ಕಳ ಎಂಟ್ರಿ ಫೀ ಕೂಡ ಜಾಸ್ತಿಯಾಗಿದೆ.

ಈವರೆಗೆ ಪ್ರವೇಶ ಶುಲ್ಕ 30 ರೂ. ಇದ್ದು, ಈಗ 50 ರೂ.ಗೆ ಟಿಕೆಟ್ ದರ ಏರಿಕೆ ಮಾಡಲಾಗಿದೆ.‌ ಇನ್ನು, ಕಾರ್ ಪಾರ್ಕಿಂಗ್ ಶುಲ್ಕವನ್ನು 50 ರೂ.ನಿಂದ 60 ರೂ.ಗೆ ಏರಿಕೆ ಮಾಡಲಾಗಿದೆ.‌ ಮಕ್ಕಳ ಪ್ರವೇಶ ಶುಲ್ಕ 20 ರೂ ಇದ್ದುದನ್ನು 30 ರೂ.ಗೆ ಏರಿಕೆ ಮಾಡಲಾಗಿದೆ.‌

ಆರು ವರ್ಷಗಳ ಹಿಂದೆ ಪ್ರವೇಶ ಶುಲ್ಕವನ್ನು 20 ರೂ.ಗಳಿಂದ 30 ರೂ.ಗೆ ಜಾಸ್ತಿ ಮಾಡಲಾಗಿತ್ತು. ಆದರೆ ಈಗ, 30 ರೂ.ನಿಂದ 50 ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ ದರ ಏರಿಕೆಯ ಪ್ರಮಾಣವೂ ಹೆಚ್ಚಳವಾಗಿದೆ. ಇದಕ್ಕೆ ಪ್ರವಾಸಿಗರು‌ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪಾರ್ಕ್​ಗಳಿಗೆ ಸಾಮಾನ್ಯವಾಗಿ ಬಡವರ್ಗದ ಕುಟುಂಬಗಳೇ ಹೆಚ್ಚಾಗಿ ಬರುತ್ತವೆ. ಒಂದೇ ಕುಟುಂಬದ ಐವರು ಬಂದರೆ ಟಿಕೆಟ್​​ಗೆ 250 ರೂ. ಕೊಟ್ರೆ ಬೇರೆ ಕಡೆ ಏನು ನೋಡಬೇಕು? ಲಾಲ್ ಬಾಗ್ ಸರ್ಕಾರ ವ್ಯಾಪ್ತಿಯಲ್ಲಿದೆ. ಶುಲ್ಕ ಇಷ್ಟೊಂದು ಜಾಸ್ತಿ ಮಾಡಿದರೆ ಸರ್ಕಾರಿ ಜಾಗಗಳಿಗೂ ಖಾಸಗಿ ಜಾಗಗಳಿಗೂ ವ್ಯಾತ್ಯಾಸ ಏನು ಇರುತ್ತದೆ ಎಂದು ಅಂತ ಪ್ರವಾಸಿಗರು ಪ್ರಶ್ನಿಸುತ್ತಿದ್ದಾರೆ. ಆದರೆ ಐದು ವರ್ಷಕ್ಕೊಮ್ಮೆ ದರ ಪರಿಷ್ಕರಣೆ ಮಾಡುತ್ತೇವೆ, ಲಾಲ್‌ಬಾಗ್‌ಗೆ ನಿತ್ಯವೂ ಸಾವಿರಾರು ಮಂದಿ ಬರ್ತಾರೆ, ಸಸ್ಯಕಾಶಿಯ ಮೇಂಟೇನೆನ್ಸ್‌ಗೆ ಹಣ ಉಪಯೋಗ ಆಗುತ್ತದೆ ಎಂದು ಲಾಲ್‌ಬಾಗ್‌ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!