ಹೊಸದಿಗಂತ ವರದಿ ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಮಂಗಳೂರು ಉತ್ತರ ವಲಯದ ವತಿಯಿಂದ ತಾಲೂಕು ಮಟ್ಟದ ಪ್ರಾಥಮಿಕ / ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ 2023-24 ಮುಲ್ಕಿಯ ಕಾರ್ನಾಡಿನ ಸಿ.ಯಸ್.ಐ.ಇ. ಶಾಲೆಯಲ್ಲಿ ಆಯೋಜಿಸಲಾಗಿದ್ದು, ಕರಾಟೆ ಕ್ರೀಡೆಯ 62-65 ಕೆ.ಜಿ. ವಿಭಾಗದಲ್ಲಿ ನಗರದ ಕೆನರಾ ಉರ್ವಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆ .ಆದಿತ್ಯ ಶೆಣೈ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಆದಿತ್ಯ ನಗರದ ಖ್ಯಾತ ಕರಾಟೆ ತರಬೇತುದಾರ ಗಣೇಶ್ ಕೆ. ಅವರ ಶಿಷ್ಯ.